Sunday 28 December 2014

Tuesday 23 December 2014



ಸಮವಸ್ತ್ರ ವಿತರಣೆ - 15/12/2014







   2014-15 ನೇ ವರ್ಷದ ಸಮವಸ್ತ್ರ ವಿತರಣಾ ಸಮಾರಂಭವನ್ನು ತಾ:15/12/2014 ನೇ ಸೋಮವಾರದಂದು ಜಿ.ಎಲ್.ಪಿ ಶಾಲೆ ಮುಳಿಂಜದಲ್ಲಿ ನಡೆಸಲಾಯಿತು.

Wednesday 17 December 2014

ಸಾಕ್ಷರ ಘೋಷಣೆ - 12/12/2014


ಸಾಕ್ಷರ ಘೋಷಣೆ - 12/12/2014


          55 ಪ್ಯಾಕೇಜ್ ಗಳ ಸಾಕ್ಷರ ತರಗತಿ ತಾಃ4/12/2014 ರಂದು ಮುಗಿದು 5 ನೇ ತಾರೀಕಿನಂದು ಪ್ರಿಟೆಸ್ಟ್ ನಡೆಸಿದ್ದು ,ಮಕ್ಕಳು ಸಾಕ್ಷರರಾಗಿರುವರೆಂದು ಘೋಷಿಸುವ ಸಾಕ್ಷರ ಘೋಷಣೆಯನ್ನು ತಾಃ12/12/2014 ರಂದು ನಡೆಸಲಾಯಿತು.

ಸಾಕ್ಷರ ಪ್ರಿ- ಟೆಸ್ಟ್ ಪರೀಕ್ಷೆ - 5/12/2014


ಸಾಕ್ಷರ ಪ್ರಿ- ಟೆಸ್ಟ್ ಪರೀಕ್ಷೆ





      ತಾಃ5/12/2014 ರ ಶುಕ್ರವಾರ 3 ಗಂಟೆಯಿಂದ 4 ಗಂಟೆಯ ತನಕ ಪ್ರಿ- ಟೆಸ್ಟ್ ಪರೀಕ್ಷೆ ನಡೆ ಯಿತು.ಈ ಪರೀಕ್ಷೆಯಲ್ಲಿ 5 ಮಂದಿ ಸಾಕ್ಷರ ಮಕ್ಕಳು ಭಾಗವಹಿಸಿದ್ದು ಬರವಣಿಗೆ, ಶ್ರಾವ್ಯ ಓದುವಿಕೆ,ಬರವಣಿಗೆ,ಆಶಯ ಗ್ರಹಣ ಮಂಡಲಗಳಿದ್ದು ಈ ಮಂಡಗಳಲ್ಲಿ ಒಟ್ಟಾಗಿ 4 ಮಂದಿ B ಗ್ರೇಡ್ ನಲ್ಲಿದ್ದು, ಒಬ್ಬ C ಗ್ರೇಡಿನಲ್ಲಿರುವನು. ಮಕ್ಕಳು ಸಾಕ್ಷರ Programme ನಿಂದ ಉತ್ತಮಗೊಂಡಿರುವರು.

ಸಾಕ್ಷರ ಮಕ್ಕಳ ಸೃಜನಾತ್ಮಕ ಕ್ಯಾಂಪ್ -27/11/2014


ಸಾಕ್ಷರ ಮಕ್ಕಳ ಸೃಜನಾತ್ಮಕ ಕ್ಯಾಂಪ್





       ತಾಃ27/11/2014 ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಸಾಕ್ಷರ ಮಕ್ಕಳ ಸೃಜನಾತ್ಮಕ ಕ್ಯಾಂಪ್ ಜರಗಿತು.

Friday 21 November 2014


ಸಹಾಯ ಹಸ್ತ-14/11/2014

                                                




                ತಾ : 14/11/12014 ರ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಸರಕಾರಿ ಕಿರಿಯ
ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ಲಯನ್ಸ್ ಕ್ಲಬ್ ನ ಸಹಾಯ ನಿಧಿ ವಿತರಣಾ ಸಮಾರಂಭವು ನಡೆಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ವಹಿಸಿಕೊಂಡಿದ್ದು ಎ೦.ಪಿ.ಟಿ.ಎ ಪ್ರೆಸಿಡೆಂಟ್ ಇಂದಿರಾಕ್ಷಿಯವರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ನ ಪ್ರೆಸಿಡೆಂಟ್ ರಾಧಾಕೃಷ್ಣ ರೈ ಶಾಲಾ ಮಕ್ಕಳ ಕಲಿಕೆಗಾಗಿ 5000/- ರೂಪಾಯಿಯನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರಿಗೆ ಹಸ್ತಾಂತರಿಸಿದರು.Zonal Chairperson ಲಕ್ಷ್ಮಣ ಕುಂಬಳೆ ಮಕ್ಕಳಿಗೆ ಸಿಹಿ ತಿಂಡಿಗಳನ್ನು ವಿತರಿಸಿ ಕ್ಲಬ್ ನ ಉದ್ದೇಶ,ಸಾಧನೆಗಳನ್ನು ವಿವರಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕ್ಲಬ್ ನ ಇತರ ಭಾರವಾಹಿಗಳು ಭಾಗವಹಿಸಿದ್ದರು.ಕೊನೆಗೆ ರೇಣುಕಾ ಟೀಚರ್ ಲಯನ್ಸ ಕ್ಲಬ್ ನ ಕೊಡುಗೆಗೆ ಧನ್ಯವಾದವಿತ್ತರು.

Wednesday 19 November 2014

ಸಾಕ್ಷರ ಸಾಹಿತ್ಯ ಸಮಾಜ

                                  ಸಾಕ್ಷರ ಸಾಹಿತ್ಯ ಸಮಾಜ- 14/11/2014











ತಾಃ14/11/2014 ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಸಾಕ್ಷರ ಮಕ್ಕಳಿಂದ ಸಾಹಿತ್ಯ ಸಮಾಜ ಕಾರ್ಯಕ್ರಮ ಪ್ರಾರಂಭವಾಯಿತು.

ರಕ್ಷಕರ ಸಮ್ಮೇಳನಃ14/11/2014

 
ರಕ್ಷಕರ ಸಮ್ಮೇಳನಃ14/11/2014








  ಮಕ್ಕಳ ಹೆತ್ತವರ ಬಾಂದವ್ಯ ಹೆಚ್ಚಿಸಲು ಬೇಕಾದ ತಿಳುವಳಿಕಾ ಶಿಬಿರವು 14/11/2014 ರಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು.

ಮಕ್ಕಳ ದಿನಾಚರಣೆ


 
ಮಕ್ಕಳ ದಿನಾಚರಣೆ-13/11/2014









            ತಾಃ14/11/2014 ಮಕ್ಕಳ ದಿನಾಚರಣೆ ಪ್ರಯುಕ್ತ 13/11/2014 ಗುರುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ III ಮತ್ತು IV ನೇ ತರಗತಿ ಮಕ್ಕಳಿಗೆ ಭಾಷಣ ಸ್ಪರ್ಧೆ ನಡೆಸಲಾ ಯಿತು.

ಪಿ.ಟಿ.ಎ ಸಭೆ


 
ಪಿ.ಟಿ.ಎ ಸಭೆ-5/11/2014






ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ 5/11/2014 ರಂದು ಮಧ್ಯಾಹ್ನ 3.೦೦ ಗಂಟೆಗೆ ಶಾಲಾ ಮಕ್ಕಳ ಸಮವಸ್ತ್ರ ಬದಲಾವಣೆ ಮಾಡುವುದರ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಸಭೆ ನಡೆಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ವಹಿಸಿದರು.ಈ ಸಭೆಯಲ್ಲಿ ಎ೦.ಪಿ.ಟಿ.ಎ ಪ್ರೆಸಿಡೆಂಟ್ ಇಂದಿರಾಕ್ಷಿ ಉಪಸ್ಥಿತರಿದ್ದರು. ರೇಣುಕಾ ಟೀಚರ್(H.M.INCHRGE) ಎಲ್ಲರನ್ನು ಸ್ವಾಗತಿಸಿ ಸಮವಸ್ತ್ರ ಬದಲಾವಣೆ ವಿಷಯ ಮಂಡಿಸಿ ಸಮವಸ್ತ್ರ ದ ಬಟ್ಟೆಯ ಸಂಗ್ರಹಗಳ ಪುಸ್ತಕ ನೀಡಿ ,ಅದರಿಂದ ಒಂದನ್ನು ಆಯ್ಕೆ ಮಾಡಿದರು.ಕೊನೆಗೆ ಇಸಾಕ್ ಸರ್ ಧನ್ಯವಾದವನ್ನಿತ್ತರು.



Thursday 30 October 2014

ಬಯಲು ಪ್ರವಾಸ


ಬಯಲು ಪ್ರವಾಸ





     ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದ ೪ ನೇ ತರಗತಿಯ ಮಕ್ಕಳು ಪರಿಸರ ಪಾಠ ಭಾಗದ "ತಿಂದೂ ತಿನಸಾಗಿಯೂ"ಪಾಠದ ಮುಂದುವರಿಕೆಯಾಗಿ ಕಾಡು,ನದಿ,ಕೊಳ ಮತ್ತು ಬಯಲುಗಳ ಸಂದರ್ಶನ ನಡೆಸಿ ನಿರೀಕ್ಷಣೆ ಟಿಪ್ಪಣಿ ತಯಾರಿಸಿದರು.ಮಕ್ಕಳೊಟ್ಟಿಗೆ ಅಧ್ಯಾಪಿಕೆಯರು ಮಾರ್ಗದರ್ಶನ ನೀಡಿದರು.

Wednesday 8 October 2014

ಶುಚಿತ್ವ ಮಾಸಾಚರಣೆ - 2/10/2014



ಶುಚಿತ್ವ ಮಾಸಾಚರಣೆ    2-10-2014




ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾದ ಮುಳಿಂಜದಲ್ಲಿ ಗಾಂಧೀ ಜಯಂತಿಯ ಅಂಗ ವಾಗಿ ತಾ- 2/10/2014 ಗುರುವಾರದಂದು ಶುಚಿತ್ವ ಮಾಸಾಚರಣೆಯೆಂಬ ಕಾರ್ಯಕ್ರಮಕ್ಕೆ ಶಾಲಾ ಪಿ.ಟಿ.ಎ ಪ್ರೆಸಿಡೆಂಟ್ ಆದ ಚಂದ್ರಹಾಸರವರು ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಎ೦.ಪಿ.ಟಿ.ಎ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟ್,ಪಿ.ಟಿ.ಎ ವೈಸ್ ಪ್ರೆಸಿಡೆಂಟ್ ಉಪಸ್ಥಿತರಿದ್ದರು.ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಅಧ್ಯಾಪಕರು ಭಾಗವಹಿಸಿದ್ದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಶುಚಿತ್ವ ಕಾರ್ಯವು ನಡೆಯಿತು.

Wednesday 1 October 2014

ನವರಾತ್ರಿ ವೇಷ


                              ನವರಾತ್ರಿ ವೇಷ 




        ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜಕ್ಕೆ ತಾ-1/10/2014 ರ ಮಧ್ಯಾಹ್ನ 1.30 ಗಂಟೆಗೆ ಸರಿಯಾಗಿ ನವರಾತ್ರಿಯ ಪ್ರಯುಕ್ತ ಬಂದ ಸಿಂಹ ವೇಷಗಳ ಕುಣಿತವನ್ನು ನೋಡಿ ಮಕ್ಕಳು ತುಂಬಾ ಖುಷಿ ಪಟ್ಟರು.ವೇಷದ ಕುಣಿತ ಮಕ್ಕಳ ಖುಷಿ ಒಟ್ಟಿಗೆ ಹಬ್ಬವೋ ಹಬ್ಬ.

ಪಿ.ಟಿ.ಎ ಮತ್ತು ಸಿ.ಪಿ.ಟಿ.ಎ ಸಭೆ



ಪಿ.ಟಿ.ಎ ಮತ್ತು ಸಿ.ಪಿ.ಟಿ.ಎ ಸಭೆ




   ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ತಾ-30/9/2014 ರ ಮಂಗಳವಾರ 2 ಗಂಟೆಗೆ ಸರಿಯಾಗಿ ಸಿ.ಪಿ.ಟಿ.ಎ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆಯು ನಡೆಯಿತು.