Friday 18 December 2015

ಕ್ರಿಸ್ ಮಸ್ ಹಬ್ಬ ಆಚರಣೆ : 18/12/2015


  ಕ್ರಿಸ್ ಮಸ್ ಹಬ್ಬ ಆಚರಣೆ : 18/12/2015


ಕ್ರಿಸ್ ಮಸ್ ಹಬ್ಬವನ್ನು ನಮ್ಮ ಶಾಲೆಯಾದ ಮುಳಿ೦ಜದಲ್ಲಿ ತಾಃ18/12/2015 ಶುಕ್ರವಾರದ೦ದು ಆಚರಿಸಲಾಯಿತು.ಇದರ ಪ್ರಯುಕ್ತ ಎಲ್ಲಾ ಮಕ್ಕಳು ಶುಭಾಶಯ ಪತ್ರವನ್ನು ತಯಾರಿಸಿದರು.


 














ಅಲ್ಲದೆ ಸ೦ತ ಕ್ರೈಸ್ತ ತಾತ ವೇಷ ಧರಿಸಿ ,ಮಕ್ಕಳಿಗೆ ಮಿಠಾಯಿ ಹಂಚಿ ಸಂತೋಷದಿಂದ ಆಚರಿಸಲಾಯಿತು.ಅಲ್ಲದೆ ಮಧ್ಯಾಹ್ನ ಮಕ್ಕಳಿಗೆ ಊಟದೊಂದಿಗೆ ಪಾಯಸ ವಿತರಿಸಲಾಯಿತು.

Monday 9 November 2015


 ಶುಚಿತ್ವ ಮಾಸ -15/10/2015
 
      
















ತಾಃ 15/10/2015 ರ ಗುರುವಾರದಂದು ಶುಚಿತ್ವ ದಿನ ನಡೆಸಲಾಯಿತು.ಮೊದಲಿಗೆ ಎಲ್ಲಾ ಮಕ್ಕಳನ್ನು ಸೇರಿಸಿ ಕೈಗಳನ್ನು ಶುಚಿಗೊಳಿಸುವ ಆರು ಹಂತಗಳನ್ನು ಹೇಳಿ ಕೊಟ್ಟು ಕೈಗಳ ಶುಚಿತ್ವದ ಮಹತ್ವವನ್ನು ಸುರೇಶ್ ಮಾಸ್ಟರ್ ವಿವರಿಸಿ ನಂತರ ಎಲ್ಲಾ ಮಕ್ಕಳು ಅದೇ ರೀತಿ ತಮ್ಮ ಕೈಗಳನ್ನು ಸಾಬೂನು ಉಪಯೋಗಿಸಿ ತೊಳೆದು ಶುಚಿಗೊಳಿಸಿದರು
 

 
 












ಕೈ ತೊಳೆದ ನಂತರ ಕೈಗಳ ಶೃಂಖಲೆ ಮಾಡಿ ಶುಚಿತ್ವದ ಪ್ರತಿಜ್ಞೆ ಹೇಳಿದರು.ಶುಚಿತ್ವ ಪಾಲನೆ ನನ್ನ ಅತ್ಯಮೂಲ್ಯ ಕರ್ತವ್ಯ .ನಾನು ಊಟಕ್ಕಿಂತ ಮೊದಲು ,ಪಾಯಿಖಾನೆಗೆ ಹೋಗಿ ಬಂದ ನಂತರ ಕೈಗಳನ್ನು ಸಾಬೂನು ಹಾಕಿ ಚೆನ್ನಾಗಿ ತೊಳೆಯುವೆ ,ಶುಚಿತ್ವವನ್ನು ಯಾವಾಗಲೂ ಕಾಪಾಡುವೆ ಎ೦ದು ಈ ಮೂಲಕ ಪ್ರತಿಜ್ಞೆ ಗೆಯ್ಯುವೆನು.



ಪ್ರತಿಜ್ಞೆಯ ಬಳಿಕ ತರಗತಿಯಲ್ಲಿ ಕುಳಿತು ಪೋಸ್ಟರ್ ತಯಾರಿಸಲು ಹೇಳಲಾಯಿತು. ಇದಕ್ಕೆ ಬೇಕಾದ ಮಾಹಿತಿ ಮಾರ್ಗದರ್ಶನ ಗಳನ್ನು  ಅಧ್ಯಾಪಕರು ನೀಡಿದರು.ಎಲ್ಲಾ ಗುಂಪಿನಿಂದಲೂ ಉತ್ತಮ ಪೋಸ್ಟರ್ ತಯಾರಾಯಿತು.ಎಲ್ಲಾ ಮಕ್ಕಳಿಗೆ ಶುಚಿತ್ವದ ಮಹತ್ವ ,ಅರಿವು ಮೂಡಿತು.

Friday 21 August 2015

ಓಣಂ ಹಬ್ಬ -21/08/2015


ಓಣಂ ಹಬ್ಬ -21/08/2015

     ಪರಶುರಾಮನ ಸೃಷ್ಟಿಯಾದ ನಮ್ಮ ರಾಜ್ಯ ಕೇರಳದ ಪ್ರಾಂತೀಯ ಹಬ್ಬವಾಗಿದೆ ಓಣಂ.ಎಲ್ಲಾ ಮತದವರು ಅವರವರ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.ಆದರೆ ಪ್ರಾಂತೀಯ ಹಬ್ಬವಾದ ಓಣಂ ಎಲ್ಲರೂ ಆಚರಿಸುತ್ತಾರೆ.ಎಲ್ಲಾ ಮನೆಗಳು ಹಬ್ಬದಿಂದ ರಂಗು ರಂಗಾಗುತ್ತದೆ. ಪೂಕಳಂ,ವಿವಿಧ ಆಟಗಳು ,ಬಗೆ ಬಗೆಯ ಆಹಾರ ಪದಾರ್ಥಗಳು ಅಲ್ಲದೆ ಅವರವರ ಕುಟುಂಬ ದವರೊಟ್ಟಿಗೆ ಖುಷಿಯಿಂದ ಆಚರಿಸುತ್ತಾರೆ.ಅಲ್ಲದೆ ಶಾಲೆಗಳಲ್ಲೂ ,ಸಂಘ ಸಂಸ್ಥೆಗಳಲ್ಲೂ ಎಲ್ಲರೂ ಒಟ್ಟಾಗಿ ಆಚರಿಸುತ್ತಾರೆ.
ಹಾಗೆಯೇ ನಮ್ಮ ಶಾಲೆಯಲ್ಲಿ ತಾ-21/08/2015 ಶುಕ್ರವಾರ ಓಣಂ ಹಬ್ಬವನ್ನು ಆಚರಿಸಿದೆವು. ಮಕ್ಕಳು ,ಎಸ್.ಎ೦.ಸಿ ಸದಸ್ಯರು,ಬಿ.ಆರ್.ಸಿ ಯವರು ಪಾಲ್ಗೊಂಡರು. ಮಕ್ಕಳು,ಅಧ್ಯಾಪಕರು ಎಲ್ಲರೂ ಸೇರಿ ಬಣ್ಣ ಬಣ್ಣದ ಹೂಗಳಿಂದ ಪೂಕಳಂ ರಚಿಸಿದರು.ಪೂಕಳಂ ಎಲ್ಲರ ಮೊಬೈಲುಗಳಲ್ಲಿ ಸೆರೆಯಾಯಿತು.


 

ಟೀಚರು,ಶಾಲಾ ಸಿಬ್ಬಂದಿಗಳು ಸೇರಿ ಮಧ್ಯಾಹ್ನ 12.30 ರ ಹೊತ್ತಿಗೆ ಔತಣ ತಯಾರಾಯಿತು. ನಂತರ ಮಕ್ಕಳ ಊಟವಾಯಿತು. ಮಕ್ಕಳಿಗೆ ಬಗೆ ಬಗೆಯ ಪದಾರ್ಥಗಳು ,ಪಾಯಸ ಇವೆಲ್ಲವನ್ನು ಕಂಡು ತುಂಬಾ ಖುಷಿಯಾಯಿತು.ನಂತರ ಎಸ್.ಎ೦.ಸಿ ಸದಸ್ಯರ,ಬಿ.ಆರ್.ಸಿ ಯವರ ಊಟ ವಾಯಿತು. ಕೊನೆಗೆ ಅಧ್ಯಾಪಕರು ಊಟವಾಯಿತು.ನಂತರ ಸಂಜೆ ಹೊತ್ತಿಗೆ ಮಕ್ಕಳು ತಮ್ಮ ಮನೆಗೆ ನಡೆದರು.ಅಲ್ಲದೆ ಓಣಂ ರಜಾ ಅಸ್ವಾದಿಸುವ ಖುಷಿಯಲ್ಲಿ ದ್ದರು.
 

Tuesday 18 August 2015

ಸ್ವಾತಂತ್ರ್ಯ ದಿನಾಚರಣೆಃ 15/08/2015




 
ಸ್ವಾತಂತ್ರ್ಯ ದಿನಾಚರಣೆಃ  15/08/2015

ತಾಃ15/08/2015 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಬಹಳ ಅದ್ದೂರಿಯಿಂದ ನಡೆದಿತ್ತು.ಮಂಗಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಆಲಿ ಮಾಸ್ಟರ್ ಧ್ವಜಾರೋಹಣ ಗೈದು ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆ ಯ ಮಹತ್ವವನ್ನು ತಿಳಿಸಿ ಎಲ್ಲರಿಗೂ ಶುಭಾಶಯ ಕೋರಿದರು. 

 


 

















ಅಲ್ಲದೆ ಬಿ.ಆರ್.ಸಿ ಯ ಬಿ.ಪಿ.ಒ ಆದ ವಿಜಯ ಕುಮಾರ್ ಸರ್ ಸ್ವಾತಂತ್ರ್ಯ ದಿನಾಚರಣೆ ಯ ಮಹತ್ವವನ್ನು ತಿಳಿಸಿ ,ಮಕ್ಕಳಿಗೆ ಒಂದು ಹಾಡನ್ನು ಹಾಡಿದರು.ಮತ್ತು ಪಿ.ಟಿ.ಎ ಪ್ರೆಸಿಡೆಂಟ್, ,ಶಾಲಾ ಮುಖ್ಯೋಪಾಧ್ಯಾಯರು ಶುಭಾಶಂಸನೆ ಕೋರಿದರು.ಅಲ್ಲದೆ ಅಧ್ಯಾಪಕರು,ರಕ್ಷಕರು,.ಎಮ್.ಪಿ. ಟಿ ಎ ಪ್ರೆಸಿಡೆಂಟ್ ,ಕುಟುಂಬಶ್ರೀ ಸದಸ್ಯರು ಉಪಸ್ಥಿತರಿದ್ದರು. ನಂತರ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 



 

















ಕೊನೆಯಲ್ಲಿ ಶಾಲಾ ವತಿಯಿಂದ,ಪಂಚಾಯತ್ ನಿಂದ,ಹಳೆ ವಿದ್ಯಾರ್ಥಿ ವಿದ್ಯಾರ್ಥಿನಿ ಯಾದ ಗುರುರಾಜ್ ಕೊಂಡೆವೂರ್ ಮತ್ತು ಸ್ನೇಹ ಶಶಿಧರ್ ಪೂಂಜ ವತಿಯಿಂದ,ಕುಟುಂಬಶ್ರೀ ವತಿಯಿಂದಲೂ ಸಿಹಿತಿಂಡಿ ಹಂಚಲಾಯಿತು.ಅಲ್ಲದೆ ಅಂಗನವಾಡಿಯ ಪರವಾಗಿ ಪಾಯಸ ವಿತರಿಸಲಾಯಿತು. ನಂತರ ರೇಣುಕಾ ಟೀಚರ್ ಎಲ್ಲರಿಗೂ ಧನ್ಯವಾದವನ್ನರ್ಪಿಸಿದರು.






ಸ್ವಾತಂತ್ರ್ಯ ದಿನಾಚರಣೆ -13/08/2015


ಸ್ವಾತಂತ್ರ್ಯ ದಿನಾಚರಣೆಯ  ಸ್ಪರ್ಧೆ

ಶಾಲೆಯಲ್ಲಿ ನಡೆಯುವ ಪಠ್ಯೇತರ ಚಟುವಟಿಕೆಗಳು ಮಕ್ಕಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.ಇಂದಿನ ಮಕ್ಕಳಲ್ಲಿ ನಮ್ಮ ದೇಶದ ಕುರಿತಾಗಿ ಅಭಿಮಾನ ,ಪ್ರೀತಿ ,ದೇಶ ಭಕ್ತಿ ಮೂಡಿಸಬೇಕಾಗಿದೆ.ಸ್ವಾತಂತ್ರ್ಯಕ್ಕೆ ಹೋರಾಡಿದವರ ಜೀವನ ,ತ್ಯಾಗ,ಬಲಿದಾನಗಳನ್ನು ತಿಳಿಸಿ ,ಮಕ್ಕಳಲ್ಲಿ ದೇಶಕ್ಕಾಗಿ ,ಇತರರಿಗಾಗಿ ದುಡಿಯುವ, ಸಹಾಯ ಮಾಡುವ ಮನೋಭಾವ ಬೆಳೆಸಿ ,ಒಬ್ಬ ಉತ್ತಮ ಪ್ರಜೆಯಾಗಿ ರೂಪಿಸಬೇಕಾಗಿದೆ.ದಿನಂಪ್ರತಿ ಮಾಡಬೇಕಾದ ಈ ಕಾರ್ಯವನ್ನು ರಾಷ್ಟ್ರೀಯ ಹಬ್ಬದಂದಾದರೂ ಮಾಡಬೇಕಾದುದು ಅಧ್ಯ್ಯಾಪಕರ ಕರ್ತವ್ಯ.
ಪ್ರತೀ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ.ಇದರ ಅಂಗವಾಗಿ ಮಕ್ಕಳಿಗೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಲಾಗುತ್ತದೆ.
ಅದರಂತೆಯೇ ಈ ವರ್ಷವೂ ತಾಃ 13/08/2015 ರಂದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. 1 ಮತ್ತು 2 ನೇ ತರಗತಿ ಮಕ್ಕಳಿಗೆ ಚಿತ್ರ ರಚನೆ,ದೇಶ ಭಕ್ತಿಗೀತೆ ಮತ್ತು 3 ಮತ್ತು 4 ನೇ ತರಗತಿ ಮಕ್ಕಳಿಗೆ ದೇಶಭಕ್ತಿಗೀತೆ,ಭಾಷಣ,ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.ಅಲ್ಲದೆ ಸ್ಪರ್ಧೆಗಳಲ್ಲಿ ವಿಜೇತರನ್ನು ಘೋಷಿಸಲಾಯಿತು






































Monday 10 August 2015


ಹಿರೋಶಿಮ ದಿನ


    ತಾ -6/8/2015 ಗುರುವಾರದಂದು ಹಿರೋಶಿಮ ದಿನ.ಆದಿನ ಬೆಳಿಗ್ಗೆ ಶಾಲೆಯಲ್ಲಿ ಅಸೆಂಬ್ಲಿ ನಡೆಸಲಾಯಿತು.ಹಿರೋಶಿಮದಲ್ಲಿ ನಡೆದ ಯುದ್ಧದ ಕುರಿತಾಗಿ ಶಾಲಾ ಮುಖ್ಯೋಪಾಧ್ಯಾಯ ರಾದ ರವೀಂದ್ರ ಮಾಸ್ಟರ್ ಲಘು ವಿವರಣೆಯನ್ನು ನೀಡಿದರು.ಅಲ್ಲದೆ ಶಾಲಾ ಅಧ್ಯಾಪಕ ರಾದ ಸುರೇಶ್ ಮಾಸ್ಟರ್ ಕೂಡಾ ಮಕ್ಕಳಿಗೆ ಆ ದಿನದ ಪ್ರತ್ಯೇಕತೆ ಮತ್ತು ಹಿರೋಶಿಮ ಯುದ್ಧದಲ್ಲಿ ಹಾಕಿದ ಅಣುಬಾಂಬಿನ ದುರಂತದಿಂದ ರೋಗಕ್ಕೆ ಬಲಿಯಾದ ಒಂದು ಪುಟ್ಟ ಬಾಲಕಿ,ಆಕೆ ರೋಗದಿಂದ ಮುಕ್ತಿ ಹೊಂದಿ ತನ್ನ ಜೀವವನ್ನು ರಕ್ಷಿಸಲು ಕಾಗದದಲ್ಲಿ 1000 ಕೊಕ್ಕುಗಳನ್ನು ನಿರ್ಮಿಸಲು ಪ್ರಯತ್ನಿಸಿದಳು.ಆದರೆ ಅವಳು ಅದು ಸಫಲವಾಗುವ ಮೊದಲೇ ಸ್ವರ್ಗಸ್ತಳಾದಳು.ನಂತರ ಅವಳ ಸ್ನೇಹಿತರು ಕೊಕ್ಕನ್ನು ನಿರ್ಮಿಸಿ ಅವಳ ಶವ ಕುಟೀರಕ್ಕೆ ಹಾಕಿದರು.ಎ೦ದು ಆಕೆಯ ಬಗ್ಗೆ ವಿವರಣೆ ನೀಡಿ ಅಂತಹ ಕೊಕ್ಕನ್ನು ಮಾಡಿ ತೋರಿಸಿದರು.







ಅಸೆಂಬ್ಲಿಯ ನಂತರ ಯುದ್ಧ ವಿರೋಧಿ ಘೋಷಣಾ ಮೆರವಣಿಗೆ ನಡೆಯಿತು.ಮಕ್ಕಳು "ಬೇಡ,ಬೇಡ ಯುದ್ಧ ಬೇಡ,ಬೇಕು ಬೇಕು ಶಾಂತಿ ಬೇಕು.'' ''ಯುದ್ಧಾ ನಂತರದ ಗೋಳು, ಭೂಮಿಯೆಲ್ಲಾ ಬೋಳು ಬೋಳು.” “ಲೋಕ ಶಾಂತಿಯೇ ನಮ್ಮೆಲ್ಲರ ಗುರಿಯಾಗಿರಲಿ,ಯುದ್ಧದ ಮನೋಭಾವ ದೂರವಾಗಲಿ.” ಎ೦ಬ ಘೋಷಣೆಯನ್ನು ಕೂಗುತ್ತಾ ಮೆರವಣಿಗೆಯು ರಸ್ತೆವರೆಗೆ ಸಾಗಿ ಪುನಃ ಶಾಲೆಗೆ ಹಿಂತಿರುಗಿತು.ಇದರಿಂದಾಗಿ ಮಕ್ಕಳಿಗೆ "ಯುದ್ಧ ಮಾಡ ಬಾರದು.ಎಲ್ಲರೂ ಒಂದಾಗಿ ಶಾಂತಿ ,ಸಮಾಧಾನ ಏಕತೆಯಿಂದ ಬಾಳಬೇಕು" ಎ೦ಬ ಮಾಹಿತಿ ದೊರೆಯಿತು.
                                        
Games


Wednesday 5 August 2015

ಚಾಂದ್ರದಿನ -21/07/2015


ಚಾಂದ್ರದಿನ -21/07/2015
ತಾ -21/07/2015 ರಂದು ಚಾಂದ್ರದಿನದ ಕುರಿತು ಮುಖ್ಯೋಪಾಧ್ಯಾಯರು ವಿವರಣೆ ನೀ
ಡಿದರು.ಅಲ್ಲದೆ ಅಧ್ಯಾಪಕರಾದ ಸುರೇಶ್ ಮಾಸ್ಟರ್ ಮಾನವನ ಸಾಧನೆಗಳ ಮತ್ತು ಸಂಶೋಧನೆ ಯ ಮಕ್ಕಳಿಗೆ ತಿಳಿಯ ಪಡಿಸಿದರು. ಅಲ್ಲದೆ ಚಾಂದ್ರದಿನದ ಪರವಾಗಿ ಮಕ್ಕಳಿಗೆ ರಸಪ್ರಶ್ನೆ ನಡೆಸಿ ದೆವು. ರಸಪ್ರಶ್ನೆಯಲ್ಲಿ 4 ನೇ ತರಗತಿಯ ಹನಾ ಮೊದಲನೇ ಸ್ಥಾನ ಮತ್ತು ಹಮ್ನಾ ದ್ವೀತೀಯ ಸ್ಥಾನ ವನ್ನು ಪಡೆದರು. ಇಸಾಕ್ ಮಾಸ್ಟರ್ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು
 
 

ಶಿಕ್ಷಕ ರಕ್ಷಕ ಸಂಘದ ಮಹಾಸಭೆ -14/07/2015


ಶಿಕ್ಷಕ ರಕ್ಷಕ ಸಂಘದ ಮಹಾಸಭೆ -14/07/2015


ತಾ-14/07/2015 ರಂದು ಮಧ್ಯಾಹ್ನ 2.೦೦ ಗಂಟೆಗೆ ಸರಿಯಾಗಿ ಮುಳಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಕ್ಷಕ ಸಂಘದ ಮಹಾಸಭೆ ಸೇರಲಾಯಿತು.ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರೂ ಭಾಗವಹಿಸಿದ್ದರು.ಮಹಾಸಭೆಯಲ್ಲಿ ಎಸ್.ಎ೦.ಸಿ ಸದಸ್ಯರು ಕಳೆದ ವರ್ಷ ಇದ್ದವರೂ ,ಕೆಲವು ಹೊಸ ಸದಸ್ಯರನ್ನೂ ಆರಿಸಲಾಯಿತು.ಈ ಸಭೆಯ ಸಭಾಧ್ಯಕ್ಷ ಶ್ರೀ ಚಂದ್ರಹಾಸ ಆಳ್ವ ಪಿ.ಟಿ.ಎ ಪ್ರೆಸಿಡೆಂಟ್ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.ರೇಣುಕಾ ಟೀಚರ್ ಎಲ್ಲರನ್ನು ಸ್ವಾಗತಿಸಿ,ನಂತರ2014-15 ರ ಲೆಕ್ಕ ಪತ್ರ ಮಂಡಿಸಿದರು. ನಂತರ ಹೊಸ 2015-16 ರ ಸಮಿತಿ ರೂಪೀಕರಣ ನಡೆಯಿತು.ಪಿ.ಟಿ.ಎ ಪ್ರೆಸಿಡೆಂಟ್ ಕಳೆದ ವರ್ಷದ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಆಳ್ವ ಹಾಗೂ ವೈಸ್ ಪ್ರೆಸಿಡೆಂಟ್ ಆಗಿ ಉಮ್ಮರ್ ರನ್ನು ಆರಿಸಲಾಯಿತು.
ಎ೦.ಪಿ.ಟಿ.ಎ ಅಧ್ಯಕ್ಷೆಯಾಗಿ ಕಳೆದ ವರ್ಷದ ಅಧ್ಯಕ್ಷೆ ಯಾದ ಶ್ರೀಮತಿ .ಇಂದಿರಾಕ್ಷಿ ಸರ್ವಾನುಮತದಿಂದ ಆಯ್ಕೆಯಾದರು.ಸಮಿತಿ ರೂಪೀಕರಣದ ಕೊನೆಗೆ ಸುರೇಶ್ ಮಾಸ್ಟರ್ ಧನ್ಯವಾದವನ್ನರ್ಪಿಸಿದರು.

ಸಮವಸ್ತ್ರ ವಿತರಣೆ -14/07/2015


ಸಮವಸ್ತ್ರ ವಿತರಣೆ -14/07/2015



   ಕಾನೂನಿನ ಮುಂದೆ ಎಲ್ಲರೂ ಸಮಾನರು,ಅಂಗ,ಜಾತಿ,ಅಂತಸ್ತುಗಳ ಭೇದವಿಲ್ಲ”ಹೀಗೆ ನಮ್ಮ ಭಾರತದ ಸಂವಿಧಾನ ಹೇಳುತ್ತಿದೆ.ಶಾಲೆಗಳಲ್ಲಿ ಕಲಿಯುವ ಮಕ್ಕಳಲ್ಲಿ ಬಡವ -ಶ್ರೀಮಂತ ,ಜಾತಿ- ಮೇಲ್ಜಾತಿಯವರೂ ಇರುತ್ತಾರೆ.ಅವರವರ ಮಟ್ಟಕ್ಕೆ ಅನುಸರಿಸಿ ಬಟ್ಟೆ ಬರೆಗಳನ್ನು ಧರಿಸಿ ಬಂದಾಗ, ಏನು ಇಲ್ಲದ ಮಕ್ಕಳ ಮನಸ್ಸಿಗೆ ಬೇಸರವಾಗುತ್ತದೆ. ನಾನು ಬಡವ ಎ೦ಬ ಭಾವನೆ ಬೆಳೆದು ಕುಗ್ಗು ತ್ತಾ  ಹೋಗುತ್ತಾರೆ. ಇದಕ್ಕಾಗಿ ಶಾಲೆಗಳಲ್ಲಿ ಎಲ್ಲಾ ಮಕ್ಕಳು ಸಮಾನರಾಗಿ ಇರಬೇಕೆಂಬ ದೃಷ್ಟಿ ಯಿಂದ ಸಮವಸ್ತ್ರದ ಯೋಜನೆ ಜಾರಿಗೆ ಬಂದಿದೆ.ಸರಕಾರದಿಂದ ದೊರೆತ ಶಾಲೆಗಳಲ್ಲಿ ನೀಡಿದ ಸಮವಸ್ತ್ರವನ್ನು ಎಲ್ಲರೂ ಧರಿಸಿದರೆ ನನ್ನಲ್ಲಿ ಇದೆ,ಇಲ್ಲ ಎ೦ಬ ತಾರತಮ್ಯಗಳು ದೂರವಾಗಿ ಸಮಾನ ರಾಗಿ ಒಂದಾಗಿ ಕತಿಯಲು ಅವಕಾಶ ಸಿಗುತ್ತದೆ.ಅನೇಕ ಸಂಸ್ಥೆಗಳಲ್ಲಿ ಈ ಸಮವಸ್ತ್ರ ಜಾರಿಯಲ್ಲಿದೆ. ಶಾಲೆಗೆ ಸಂಬಂಧಿಸಿ ಮಕ್ಕಳಿಗೆ ಸಮವಸ್ತ್ರ ಇದ್ದರೆ ನೋಡಲು ಅಂದ,ಶಿಸ್ತು ,ಸಮಾನತೆ ಎಲ್ಲವೂ ಕಂಡು ಬರುತ್ತದೆ.
     ತಾ-14/07/2015 ಮಂಗಳವಾರ೩ ಗಂಟೆಗೆ ಸರಿಯಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಾದ ಮುಳಿಂಜದಲ್ಲಿ ಸಮವಸ್ರ್ತ ವಿತರಣೆ ಸಮಾರಂಭ ನಡೆಯಿತು.ಈ ಸಭೆಯಲ್ಲಿ ಅಧ್ಯಕ್ಷರಾಗಿ ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ಉಪಸ್ಥಿತರಿದ್ದರು.ಈ ಕಾರ್ಯಕ್ರಮದ ಉಧ್ಘಾಟನೆಯನ್ನು ನೆರವೇರಿಸಬೇಕಾಗಿದ್ದ ಮಂಗಲ್ಪಾಡಿ ಪಂಚಾಯತ್ ಉಪಾಧ್ಯಕ್ಷರಾದ ಅಲಿ ಮಾಸ್ಟರಿಗೆ ಬರಲು ಅನಾನುಕೂಲವಾದ ಕಾರಣ ನಮ್ಮ ಶಾಲಾ ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ರವರು ಮ ಕ್ಕಳಿಗೆ ಸಮವಸ್ತ್ರವನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಕಾರ್ಯಕ್ರಮಕ್ಕೆ ಎಲ್ಲರನ್ನು ರೇಣುಕಾ ಟೀಚರ್ ಸ್ವಾಗತಿಸಿದರು. ಕಲಿಕೆಗೆ ಮಕ್ಕಳಿಗೆ ಸಹಾಯವಾಗುವಂತೆ ಸರಕಾರ ಸಮವಸ್ತ್ರ ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದರ ಲಾಭವನ್ನು ಪಡೆದು ಚೆನ್ನಾಗಿ ಕಲಿತು ವಿದ್ಯಾವಂತರಾಗಿ ಎ೦ದು ಶಾಲಾ ಮುಖ್ಯೋಪಾಧ್ಯಾಯರಾದ ರವೀಂದ್ರ ಮಾಸ್ಟರ್ ಶುಭವನ್ನು ಹಾರೈಸಿದರು. ಕೊನೆಗೆ ಸುರೇಶ್ ಕುಮಾರ್ ಮಾಸ್ಟರ್ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.