ಓಣಂ
ಹಬ್ಬ -21/08/2015
ಪರಶುರಾಮನ
ಸೃಷ್ಟಿಯಾದ ನಮ್ಮ ರಾಜ್ಯ ಕೇರಳದ
ಪ್ರಾಂತೀಯ ಹಬ್ಬವಾಗಿದೆ ಓಣಂ.ಎಲ್ಲಾ
ಮತದವರು ಅವರವರ ಹಬ್ಬಗಳನ್ನು
ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ.ಆದರೆ
ಪ್ರಾಂತೀಯ ಹಬ್ಬವಾದ ಓಣಂ ಎಲ್ಲರೂ
ಆಚರಿಸುತ್ತಾರೆ.ಎಲ್ಲಾ
ಮನೆಗಳು ಹಬ್ಬದಿಂದ ರಂಗು ರಂಗಾಗುತ್ತದೆ.
ಪೂಕಳಂ,ವಿವಿಧ
ಆಟಗಳು ,ಬಗೆ
ಬಗೆಯ ಆಹಾರ ಪದಾರ್ಥಗಳು ಅಲ್ಲದೆ
ಅವರವರ ಕುಟುಂಬ ದವರೊಟ್ಟಿಗೆ
ಖುಷಿಯಿಂದ ಆಚರಿಸುತ್ತಾರೆ.ಅಲ್ಲದೆ
ಶಾಲೆಗಳಲ್ಲೂ ,ಸಂಘ
ಸಂಸ್ಥೆಗಳಲ್ಲೂ ಎಲ್ಲರೂ ಒಟ್ಟಾಗಿ
ಆಚರಿಸುತ್ತಾರೆ.
ಹಾಗೆಯೇ
ನಮ್ಮ ಶಾಲೆಯಲ್ಲಿ ತಾ-21/08/2015
ಶುಕ್ರವಾರ
ಓಣಂ ಹಬ್ಬವನ್ನು ಆಚರಿಸಿದೆವು.
ಮಕ್ಕಳು
,ಎಸ್.ಎ೦.ಸಿ
ಸದಸ್ಯರು,ಬಿ.ಆರ್.ಸಿ
ಯವರು ಪಾಲ್ಗೊಂಡರು.
ಮಕ್ಕಳು,ಅಧ್ಯಾಪಕರು
ಎಲ್ಲರೂ ಸೇರಿ ಬಣ್ಣ ಬಣ್ಣದ ಹೂಗಳಿಂದ
ಪೂಕಳಂ ರಚಿಸಿದರು.ಪೂಕಳಂ
ಎಲ್ಲರ ಮೊಬೈಲುಗಳಲ್ಲಿ
ಸೆರೆಯಾಯಿತು.
ಟೀಚರು,ಶಾಲಾ
ಸಿಬ್ಬಂದಿಗಳು ಸೇರಿ ಮಧ್ಯಾಹ್ನ
12.30
ರ
ಹೊತ್ತಿಗೆ ಔತಣ ತಯಾರಾಯಿತು. ನಂತರ
ಮಕ್ಕಳ ಊಟವಾಯಿತು.
ಮಕ್ಕಳಿಗೆ
ಬಗೆ ಬಗೆಯ ಪದಾರ್ಥಗಳು ,ಪಾಯಸ
ಇವೆಲ್ಲವನ್ನು ಕಂಡು ತುಂಬಾ
ಖುಷಿಯಾಯಿತು.ನಂತರ
ಎಸ್.ಎ೦.ಸಿ
ಸದಸ್ಯರ,ಬಿ.ಆರ್.ಸಿ
ಯವರ ಊಟ ವಾಯಿತು. ಕೊನೆಗೆ
ಅಧ್ಯಾಪಕರು ಊಟವಾಯಿತು.ನಂತರ
ಸಂಜೆ ಹೊತ್ತಿಗೆ ಮಕ್ಕಳು ತಮ್ಮ
ಮನೆಗೆ ನಡೆದರು.ಅಲ್ಲದೆ
ಓಣಂ ರಜಾ ಅಸ್ವಾದಿಸುವ ಖುಷಿಯಲ್ಲಿ
ದ್ದರು.