Thursday 30 October 2014

ಬಯಲು ಪ್ರವಾಸ


ಬಯಲು ಪ್ರವಾಸ





     ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದ ೪ ನೇ ತರಗತಿಯ ಮಕ್ಕಳು ಪರಿಸರ ಪಾಠ ಭಾಗದ "ತಿಂದೂ ತಿನಸಾಗಿಯೂ"ಪಾಠದ ಮುಂದುವರಿಕೆಯಾಗಿ ಕಾಡು,ನದಿ,ಕೊಳ ಮತ್ತು ಬಯಲುಗಳ ಸಂದರ್ಶನ ನಡೆಸಿ ನಿರೀಕ್ಷಣೆ ಟಿಪ್ಪಣಿ ತಯಾರಿಸಿದರು.ಮಕ್ಕಳೊಟ್ಟಿಗೆ ಅಧ್ಯಾಪಿಕೆಯರು ಮಾರ್ಗದರ್ಶನ ನೀಡಿದರು.

Wednesday 8 October 2014

ಶುಚಿತ್ವ ಮಾಸಾಚರಣೆ - 2/10/2014



ಶುಚಿತ್ವ ಮಾಸಾಚರಣೆ    2-10-2014




ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾದ ಮುಳಿಂಜದಲ್ಲಿ ಗಾಂಧೀ ಜಯಂತಿಯ ಅಂಗ ವಾಗಿ ತಾ- 2/10/2014 ಗುರುವಾರದಂದು ಶುಚಿತ್ವ ಮಾಸಾಚರಣೆಯೆಂಬ ಕಾರ್ಯಕ್ರಮಕ್ಕೆ ಶಾಲಾ ಪಿ.ಟಿ.ಎ ಪ್ರೆಸಿಡೆಂಟ್ ಆದ ಚಂದ್ರಹಾಸರವರು ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಎ೦.ಪಿ.ಟಿ.ಎ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟ್,ಪಿ.ಟಿ.ಎ ವೈಸ್ ಪ್ರೆಸಿಡೆಂಟ್ ಉಪಸ್ಥಿತರಿದ್ದರು.ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಅಧ್ಯಾಪಕರು ಭಾಗವಹಿಸಿದ್ದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಶುಚಿತ್ವ ಕಾರ್ಯವು ನಡೆಯಿತು.

Wednesday 1 October 2014

ನವರಾತ್ರಿ ವೇಷ


                              ನವರಾತ್ರಿ ವೇಷ 




        ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜಕ್ಕೆ ತಾ-1/10/2014 ರ ಮಧ್ಯಾಹ್ನ 1.30 ಗಂಟೆಗೆ ಸರಿಯಾಗಿ ನವರಾತ್ರಿಯ ಪ್ರಯುಕ್ತ ಬಂದ ಸಿಂಹ ವೇಷಗಳ ಕುಣಿತವನ್ನು ನೋಡಿ ಮಕ್ಕಳು ತುಂಬಾ ಖುಷಿ ಪಟ್ಟರು.ವೇಷದ ಕುಣಿತ ಮಕ್ಕಳ ಖುಷಿ ಒಟ್ಟಿಗೆ ಹಬ್ಬವೋ ಹಬ್ಬ.

ಪಿ.ಟಿ.ಎ ಮತ್ತು ಸಿ.ಪಿ.ಟಿ.ಎ ಸಭೆ



ಪಿ.ಟಿ.ಎ ಮತ್ತು ಸಿ.ಪಿ.ಟಿ.ಎ ಸಭೆ




   ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ತಾ-30/9/2014 ರ ಮಂಗಳವಾರ 2 ಗಂಟೆಗೆ ಸರಿಯಾಗಿ ಸಿ.ಪಿ.ಟಿ.ಎ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಸಭೆಯು ನಡೆಯಿತು.