Tuesday 17 March 2015

ಶಾಲಾ ವಾರ್ಷಿಕೋತ್ಸವ -10/03/2015


ಶಾಲಾ ವಾರ್ಷಿಕೋತ್ಸವ -10/03/2015




ತಾಃ10/03/2015 ರ ಮಂಗಳವಾರ ಬೆಳಿಗ್ಗೆ 9.30 ಗಂಟೆಗೆ ನಡೆದ ಧ್ವಜಾರೋಹಣದೊಂದಿಗೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ಪ್ರಾರಂಭವಾಯಿತು.ಶಾಲಾ ಪಿ.ಟಿ.ಎ ಪ್ರೆಸಿಡೆಂಟ್ ಆದ ಶ್ರೀ ಚಂದ್ರಹಾಸ ಆಳ್ವ ಧ್ವಜಾರೋಹಣ ಗೈದರು.ಮಧ್ಯಾಹ್ನ ಊಟದ ನಂತರ2.30 ಗಂಟೆಯಿಂದ ಸಭಾ ಕಾರ್ಯಕ್ರಮಕ್ಕೆ ಮೊದಲು ಸ್ವಾಗತ ನೃತ್ಯವನ್ನು ಮಾಡಿ ಎಲ್ಲರನ್ನು ಸ್ವಾಗತಿಸಲಾಯಿತು.ಅಲ್ಲದೆ IV ನೇ ಮತ್ತು III ನೇ ತರಗತಿಯ ಮಕ್ಕಳಿಂದ "ನಿಸರ್ಗ"ಎ೦ಬ ಕಿರು ನಾಟಕ ನಡೆಯಿತು.ನಂತರ 3.೦೦ ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.


 

 ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಎ೦.ಕೆ.ಅಲಿ ಮಾಸ್ಟರ್ (ವೈಸ್ ಪ್ರೆಸಿಡೆಂಟ್ ಮಂಗಲ್ಪಾಡಿ ಗ್ರಾಮ ಪಂಚಾಯತ್) ಅಧ್ಯಕ್ಷರಾಗಿ ಶ್ರೀ ವಿಜಯಕುಮಾರ್ ಸರ್ (ಬಿ.ಪಿ.ಒ ಬಿ.ಆರ್.ಸಿ ಮಂಜೇಶ್ವರ) ಉಪಸ್ಥಿತರಿದ್ದರು.ಈ ಕಾರ್ಯಕ್ರಮಕ್ಕೆ ಶ್ರೀ.ನಂದಿಕೇಶನ್ ಸರ್ (ಅಸಿಸ್ಟೆಂಟ್ ಎಜುಕೇಶನಲ್ ಆಫೀಸರ್ ,ಮಂಜೇಶ್ವರ), ಶ್ರೀ ಚಂದ್ರಹಾಸ ಆಳ್ವ (ಪಿ.ಟಿ.ಎ ಪ್ರೆಸಿಡೆಂಟ್) , ಶ್ರೀಮತಿ ಇಂದಿರಾಕ್ಷಿ (ಎ೦.ಪಿ.ಟಿ.ಎ ಪ್ರೆಸಿಡೆಂಟ್),ಮೋಹನ್ ದಾಸ್ (ರಿಟಾರ್ಡ್ ಪೋಸ್ಟ್ ಮಾಸ್ಟರ್),ರಾಧಾಕೃಷ್ಣ ಸರ್(ರಿಟಾರ್ಡ್ ಮುಖೋಪಾಧ್ಯಾಯರು) ಶುಭವನ್ನು ಹಾರೈಸಿದರು.ಶಾಲೆಯ ಕಾರ್ಯಕ್ರಮಗಳನ್ನು ಹೊತ್ತ ನೆರಳು ಎ೦ಬ ಹಸ್ತ ಪತ್ರಿಕೆಯನ್ನು ಶ್ರೀ ಎ೦.ಕೆ.ಅಲಿ ಮಾಸ್ಟರ್ (ವೈಸ್ ಪ್ರೆಸಿಡೆಂಟ್ ಮಂಗಲ್ಪಾಡಿ ಗ್ರಾಮ ಪಂಚಾಯತ್) ಶ್ರೀ.ನಂದಿಕೇಶನ್ ಸರ್ (ಅಸಿಸ್ಟೆಂಟ್ ಎಜುಕೇಶನಲ್ ಆಫೀಸರ್ ,ಮಂಜೇಶ್ವರ)ರವರಿಗೆ ಕೊಡುವುದರ ಮೂಲಕ ಉದ್ಘಾಟಿಸಿದರು. 



ಅಲ್ಲದೆ ಈ ಕಾರ್ಯಕ್ರಮದಲ್ಲಿ ರಕ್ಷಕರಿಗೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಹೆತ್ತವರಿಗೆ ವೇದಿಕೆಯಲ್ಲಿರುವ ಗಣ್ಯರು ಬಹುಮಾನ ವಿತರಿಸಿದರು. 

 ಈ ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಟೀಚರ್ ಸ್ವಾಗತವನ್ನು ಮತ್ತು ಧನ್ಯವಾದವನ್ನು ಶ್ರುತಿ ಟೀಚರ್ ನಿರ್ವಹಿಸಿದರು.ವಾರ್ಷಿಕ ವರದಿಯನ್ನು ಎಸ್.ಆರ್.ಜಿ ಕನ್ವೀನರ್ ಪುಷ್ಪಪಲತ ಟೀಚರ್ ವಾಚಿಸಿದರು.ಈ ಕಾರ್ಯಕ್ರಮವನ್ನು ಇಸಾಕ್ ಮಾಸ್ಟರ್ ನಿರೂಪಿಸಿದರು.ಸಭಾ ಕಾರ್ಯಕ್ರಮ ಮುಗಿದ ತರುವಾಯ 4.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮಕ್ಕಳ ನೃತ್ಯಗಳು ಪ್ರಾರಂಭವಾಯಿತು.














 ಮಕ್ಕಳ ವಿವಿಧ ನೃತ್ಯಗಳಿಂದ ಸೇರಿದ ಹೆತ್ತವರ ಕಣ್ ಮನ ಸಂತಸವಾಯಿತು.ಕೊನೆಗೆ 5.30 ಗಂಟೆಗೆ ಜನಗಣಮನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 


ಮೆಟ್ರಿಕ್ ಶಿಬಿರ -3/3/2015


ಮೆಟ್ರಿಕ್ ಶಿಬಿರ -3/3/2015












   ಗಣಿತ ಮಕ್ಕಳಿಗೆ ಕಬ್ಬಿಣದ ಕಡಲೆಕಾಯಿ ಎ೦ಬುದು ಎಲ್ಲರ ಮನಸ್ಸಿನ ಭಾವನೆ.ಎಲ್ಲರಿಗೂ ಇತರ ವಿಷಯಕ್ಕಿಂತಲೂ ಗಣಿತ ಕಷ್ಟವೇ ಅನಿಸುತ್ತದೆ.ನಿಜವಾದ ಗಣಿತವೆಂಬುದಕ್ಕೆ ಸ್ಪಷ್ಟ,ನಿತ್ಯ,ಸತ್ಯ ಒಂದೇ ಉತ್ತರ.ಇದು ಸುಲಭ ನಮಗೆ ಬೇಕಾಗಿರುವುದು ಮನಸ್ಸು, ಪ್ರಯತ್ನ ಮಾತ್ರ.ಆದುದರಿಂದ
ಗಣಿತ ವಿಷಯಗಳನ್ನು ಪ್ರಾಯೋಗಿಕವಾಗಿ ಬಳಸುವ ರೀತಿ ಕಲಿಯಬೇಕೆಂಬ ದೃಷ್ಟಿಯಿಂದ ಮೆಟ್ರಿಕ್ ಕಾರ್ಯಗಾರ ನಡೆದಿತ್ತು. ಇದರ ಶಿಬಿರ ತಾಃ 3/3/2015 ರಂದು ಮಂಗಳವಾರ ನಮ್ಮ ಶಾಲೆಯಲ್ಲಿ ನಡೆಯಿತು.ಮಕ್ಕಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಯಿತು.


 



 ಈ ಕಾರ್ಯಕ್ರಮವನ್ನು ಪಿ.ಟಿ.ಎ ಪ್ರೆಸಿಡೆಂಟಾದ ಚಂದ್ರಹಾಸ ಆಳ್ವ ರವರು ಗಡಿಯಾರ ಚಿತ್ರವನ್ನು
ನೋಡಿ ಸಮಯ ಸೂಚಿಸಲು ಮಕ್ಕಳಲ್ಲಿ ಹೇಳುವುದರ ಮೂಲಕ ಉದ್ಘಾಟಿಸಿದರು.ಮಕ್ಕಳಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದರು. 

 


ಮಕ್ಕಳ ಹೆತ್ತವರ ಮೆಟ್ರಿಕ್ ಶಿಬಿರ ಚರ್ಚೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಈ ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಟೀಚರ್ ಸ್ವಾಗತಿಸಿ ಇಸಾಕ್ ಮಾಸ್ಟರ್ ಧನ್ಯವಾದ ವನ್ನಿತ್ತರು.ಮಧ್ಯಾಹ್ನದ ಊಟದ ನಂತರ ಹೆತ್ತವರು ತಮ್ಮ ತಮ್ಮ ಮನೆಗೆ ತೆರಳಿದರು.
 

ರಕ್ಷಕರ ಸ್ಪರ್ಧೆ - 2/3/2015



ರಕ್ಷಕರ ಸ್ಪರ್ಧೆ - 2/3/2015




   ತಾಃ2/3/2015 ರ ಸೋಮವಾರ ೧೦ ಗಂಟೆಗೆ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ರಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.ಈ ಕಾರ್ಯಕ್ರಮವನ್ನು ಪಿ.ಟಿ.ಎ ಪ್ರೆಸಿಡೆಂಟಾದ ಚಂದ್ರಹಾಸ ಆಳ್ವ ರವರು ಬಲೂನ್ ಒಡೆಯುವುದರ ಮೂಲಕ ಉದ್ಘಾಟಿಸಿದರು. 






   ಹೆಂಗಸರಿಗೆ ಬಲೂನ್ ಊದಿಒಡೆಯುವುದು,ಕ್ಯಾಂಡಲ್ ಉರಿಸಿ ಓಡುವುದು,ಒಂದು ಕಡ್ಡಿಯಿಂದ ಅತೀ ಹೆಚ್ಚು ಕ್ಯಾಂಡಲ್ ಉರಿಸುವುದು ಮತ್ತು ಲಿಂಬೆ ಚಮಚ.ಗಂಡಸರಿಗೆ ಸೋಡಾ ಬಾಟಲಿಯಲ್ಲಿ ಕೈ ಹಿಂದೆ ಕಟ್ಟಿ ನೀರು ಕುಡಿಯುವುದು,ಸುಂದರಿಗೆ ಬೊಟ್ಟು , ತೂತು ಸ್ಟ್ರೋ ದಿಂದ ನೀರು ಕುಡಿಯುವುದು, ಅಲ್ಲದೆ ಬಾಲ್ ಪಾಸಿಂಗ್ ಸ್ಪರ್ಧೆಯು ನಡೆಯಿತು.ಮಧ್ಯಾಹ್ನ 1.00 ಗಂಟೆಯ ತನಕ ಸ್ಪರ್ಧೆ ನಡೆಯಿತು.

ಮೆಟ್ರಿಕ್ ಕಾರ್ಯಗಾರ -19/2/2015


ಮೆಟ್ರಿಕ್ ಕಾರ್ಯಗಾರ -19/2/2015





        ತಾಃ19/02/2015 ರಿಂದ 20/2/2015 ರವರೆಗೆ ಎರಡು ದಿನಗಳ ಗಣಿತಕ್ಕೆ ಸಂಬಂಧ ಪಟ್ಟ ಕಾರ್ಯಗಾರ 10 ಗಂಟೆಗೆ ಸರಿಯಾಗಿ ನಮ್ಮ ಶಾಲೆಯಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಟೀಚರ್ ಗಡಿಯಾರದ ಸಮಯದ ಕುರಿ ತಾಗಿ ವಿವರಿಸಿ ,ಎಲ್ಲರೂ ಒಂದೊಂದು ಗಡಿಯಾರ ನಿರ್ಮಿಸಬೇಕು ಎ೦ದು ಹೇಳುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.