Friday 19 June 2015

ಕೊಡೆ ಬ್ಯಾಗ್ ವಿತರಣೆ -09/06/2015


 ಕೊಡೆ ಬ್ಯಾಗ್ ವಿತರಣೆ -09/06/2015



ಶಾಲೆಯ ಆಧಾರ ಸ್ತಂಭಗಳು ಮಕ್ಕಳು ಸ್ವಚ್ಛಂಧವಾಗಿ ಹಾರಾಡುತ್ತಾ,ಆಟವಾಡುತ್ತಾ, ಕುಣಿಯುತ್ತಾ ಇರುವ ಪುಟಾಣಿ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಬಣ್ಣದ ಕಾಗದ,ಪುಗ್ಗೆಗಳ ತಳಿರು ತೋರಣಗಳನ್ನು ಕಟ್ಟುವಂತೆ,ಆ ಕಲಿಕೆಗೆ ಪೂರಕವಾಗುವ ಕಲಿಕೋಪಕರಣ, ಕೊಡೆ,ಬ್ಯಾಗ್ ಗಳನ್ನು ಕೊಟ್ಟರೆ ಮಕ್ಕಳ ಖುಷಿ ಹೇಳ ತೀರದು.ಮಕ್ಕಳಿಗೆ ಸಹಾಯ ಮಾಡುವ ಪ್ರವೃತ್ತಿ ಶಾಲೆಯವರಿಗೆ ಇರಬೇಕಾಗಿದೆ.ಆಗಲೇ ಮಕ್ಕಳಿಗೆ ಶಾಲೆ,ಕಲಿಕೆಯಲ್ಲಿ ಉತ್ಸಾಹ ಬರುತ್ತದೆ.
ನಮ್ಮ ಶಾಲೆಯಾದ ಮುಳಿಂಜದಲ್ಲಿಯೂ ಕೊಡೆ ಬ್ಯಾಗ್ ವಿತರಣೆ ಸಮಾರಂಭವು ಜೂನ್ 9 ಮಂಗಳವಾರ 2.30ಗಂಟೆಗೆ ಸರಿಯಾಗಿ ನಡೆಯಿತು.ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಟೀಚರ್ ಮತ್ತು ಅವರ ಕುಟುಂಬ ಮಕ್ಕಳಿಗೆ ಉದಾರವಾಗಿ ಈ ಕೊಡುಗೆಯನ್ನಿತ್ತರು.ಈ ಕಾರ್ಯಕ್ರಮದಲ್ಲಿ ನಮ್ಮೀ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರ್ ಎಲ್ಲರನ್ನು ಸ್ವಾಗತಿಸಿದರು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಲ್ಪಾಡಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ. ಎ೦.ಕೆ.ಅಲಿ ಮಾಸ್ಟರ್ ಮಕ್ಕಳಿಗೆ ಕೊಡೆ ಬ್ಯಾಗ್ ಗಳನ್ನು ನೀಡುವುದರ ಮೂಲಕ ನೆರವೇರಿಸಿದರು.ಅಲ್ಲದೆ ಈ ಶಾಲೆಯ ಅಧ್ಯಾಪಕರು ಮಕ್ಕಳಿಗೆ ಸರ್ವವನ್ನು ಒದಗಿಸುವ ಕಾಮದೇನುಗಳು, ಆದ್ದರಿಂದ ನಿಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ,ಈ ಶಾಲೆಯನ್ನು ಉಳಿಸಿ ,ಬೆಳೆಸಿ ಎ೦ದು ಸಲಹೆಯಿತ್ತರು.ನಂತರ ಈಕಾರ್ಯಕ್ರಮದಅಧ್ಯಕ್ಷರಾದ ಪಿ.ಟಿ. ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ಶುಭ ಹಾರೈಸಿದರು. ಇಸಾಕ್ ಮಾಸ್ಟರ್ ಈಕಾರ್ಯಕ್ರಮಕ್ಕೆ ಧನ್ಯವಾದವನ್ನರ್ಪಿಸಿದರು.

Monday 15 June 2015



ಅಭಿನಂದನೆಗಳು
ಸಾನಿಯ- IV ನೇ ತರಗತಿ 

2014-15 ನೇ ಸಾಲಿನ ಎಲ್.ಎಸ್.ಎಸ್.ಪರೀಕ್ಷೆಯಲ್ಲಿ 73 ಅಂಕ ಪಡೆದು 'A'ಗ್ರೇಡ್ ನೊಂದಿಗೆ ತೇರ್ಗಡೆಯಾಗಿ ಸ್ಕೋಲರ್ ಶಿಪ್ ಗೆ ಅರ್ಹತೆ ಪಡೆದ ಸಾನಿಯ(ಮೊಹಮ್ಮದ್ ಖಾಸಿಂ ಮತ್ತು ಝೀನತ್ ದಂಪತಿಗಳ ಪುತ್ರಿ)ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದ IV ನೇ ತರಗತಿ ವಿದ್ಯಾರ್ಥಿನಿ.

Wednesday 10 June 2015

ಪರಿಸರ ದಿನಾಚರಣೆ -5/6/2015


 ಇರಲಿ ಪರಿಸರ ನಿತ್ಯ ಸುಂದರ -5/6/2015
"ಸ್ವಚ್ಛ ಪರಿಸರ ಸುಂದರ ಬದುಕು" ಎ೦ಬ ಘೋಷಣೆ ಎಲ್ಲೆಂದರಲ್ಲಿ ಕೇಳಿ ಬರುತ್ತಿದೆ.ಸ್ವಚ್ಛ, ನಿರ್ಮಲ ಪರಿಸರ ಮಾನವನ ಉತ್ತಮ ಜೀವನಕ್ಕೆ ಬೇಕೇ ಬೇಕು.ಮಾನವನ ಅಭಿವೃದ್ಧಿಗೆ ಪರಿಸರ ನಲುಗುತ್ತಿದೆ.ಅವರ ಸಾಧನೆಗಳು ಪರಿಸರಕ್ಕೆ ಮುಲುವಾಗುತ್ತಿದೆ.ಅವನ ಆಶೆ-ಆಕಾಂಕ್ಷೆಗಳಿಗೆ ಮಿತಿಯಿಲ್ಲದಾಗಿದೆ.ಆದರೆ ಅದರಿಂದಾಗುವ ಪರಿಸರ ನಾಶದ ತೊಂದರೆಗಳು ಅವನಿಗೆ ಈಗ ಅರಿವಾಗುತ್ತದೆ.ಪರಿಸರ ಉಳಿಸುವ ಮನಸ್ಸು ಮಾಡಿದ್ದಾನೆ.ಎಲ್ಲರಲ್ಲಿ ಈ ಭಾವನೆ ಮೂಡಿಸಲು ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತೇವೆ.ಈ ದಿನಾಚರಣೆಯ ನೆಪದಲ್ಲಾದರೂ ಮಾನವ ಎಚ್ಚೆತ್ತುಕೊಳ್ಳಲಿ.ಎಚ್ಚರ ತಪ್ಪಿದರೆ ಪರಿಸರದಿಂದ ನಮ್ಮ ಬದುಕು ಬಲು ಮಸ್ತರ.
ಪರಿಸರ ದಿನಾಚರಣೆಯ ಪ್ರಯುಕ್ತ ನಮ್ಮ ಶಾಲೆಯಾದ ಮುಳಿಂಜದಲ್ಲಿ ಜೂನ್ 5 ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ಕಾರ್ಯಕ್ರಮವು ಪ್ರಾರಂಭವಾಯಿತು.ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ಮಕ್ಕಳಿಗೆ ಗಿಡ ಕೊಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮಕ್ಕಳಿಗೆ ಗಿಡ ನೆಡುವ ಮಹತ್ವವನ್ನು ವಿವರಿಸಿದರು.ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಟೀಚರ್ ಈ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ ಮಕ್ಕಳಿಗೆ ಪರಿಸರ ದಿನಾಚರಣೆಯ ಮಹತ್ವ ವಿವರಿಸಿದರು.


ನಂತರ ಪಿ.ಟಿ.ಎ ಪ್ರೆಸಿಡೆಂಟ್ ಶಾಲೆಯ ಆವರಣದಲ್ಲಿ ಗಿಡವನ್ನು ನೆಟ್ಟು ಮಕ್ಕಳಿಗೆ ಪ್ರೋತ್ಸಾಹವಿತ್ತರು.ಈ ಕಾರ್ಯಕ್ರಮದಲ್ಲಿ ಇಸಾಕ್ ಮಾಸ್ಟರ್ ಧನ್ಯವಾದವಿತ್ತರು.
ತದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.IV ನೇ ತರಗತಿಯ ಮಕ್ಕಳಿಂದ "ಗಿಡಗಳ ಮಹತ್ವ" ದ ಕುರಿತಾದ ಕಿರು ನಾಟಕ ನಡೆಯಿತು.ನಂತರ ಪರಿಸರಕ್ಕೆ ಸಂಬಂಧಿಸಿದ ಹಾಡುಗಳನ್ನು ಮಕ್ಕಳು ಹಾಡಿದರು.ಇದಕ್ಕೆ ಸಂಬಂಧಿಸಿ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.

Friday 5 June 2015

ಚಿಣ್ಣರ ಪ್ರವೇಶೋತ್ಸವ 2015-16


2015-16 ನೇ ವರ್ಷದ ಚಿಣ್ಣರ ಪ್ರವೇಶೋತ್ಸವ

ಜೂನ್ -1/2015-16
ಜೂನ್ -1 ಎಲ್ಲೆಲ್ಲೂ ಸಂಭ್ರಮ,ಸಡಗರ.ಪುಟಾಣಿ ಮಕ್ಕಳು ಶಾಲೆಯ ಒಳಗೆ ಇಡುವ ಪುಟ್ಟ ಹೆಜ್ಜೆಗಳ ಗಮ್ಮತ್ತು. ಮಕ್ಕಳನ್ನು ಸ್ವಾಗತಿಸಲು ಬಣ್ಣ ಬಣ್ಣದ ಕಾಗದ,ಪುಗ್ಗೆಗಳ ತಳಿರು ತೋರಣ. ಎಲ್ಲಾ ಶಾಲೆಗಳಲ್ಲೂ ಪ್ರವೇಶೋತ್ಸವದ ಸಂಭ್ರಮ.

ಜೂನ್- 1 ರಂದು ನಮ್ಮ ಶಾಲೆಯಲ್ಲಿ ಪ್ರವೇಶೋತ್ಸವ ಎ೦ಬ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು Rtd.ಮುಖ್ಯೋಪಾಧ್ಯಾಯಿನಿ ಯಾದ ಶ್ರೀಮತಿ.ಕಾಮೇಶ್ವರಿ ಯವರು ಮಕ್ಕಳಿಗೆ ಕಿಟ್ ಕೊಡುವುದರ ಮೂಲಕ ನಿರ್ವಹಿಸಿದರು
ಈ ಕಾರ್ಯಕ್ರಮದಅಧ್ಯಕ್ಷರಾಗಿ ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ಮಕ್ಕಳಿಗೆ ಶುಭವನ್ನಿತ್ತರು.ಈ ಕಾರ್ಯಕ್ರಮದಲ್ಲಿ ಎ೦.ಪಿ.ಟಿ.ಎ ಪ್ರೆಸಿಡೆಂಟ್ , ಎಲ್ಲಾ ಅಧ್ಯಾಪಕರು ಮತ್ತು ಮಕ್ಕಳ ಹೆತ್ತವರು ಭಾಗವಹಿಸಿದರು. ನಮ್ಮೀ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರ್ ಸ್ವಾಗತಿಸಿ, ಇಸಾಕ್ ಮಾಸ್ಟರ್ ಧನ್ಯವಾದ ವನ್ನರ್ಪಿಸಿದರು. ಶಾಲೆಗಳು ಉಳಿಯಬೇಕಾದರೆ ಹೆತ್ತವರ,ಸಮಾಜದ ಪಾತ್ರ ತುಂಬಾ ಬೇಕು.ಸತ್ ಪ್ರಜೆಗಳನ್ನು ಸೃಷ್ಟಿಸುವ ಶಾಲೆಗಳು ಸಮಾಜದ ದೇಗುಲದಂತೆ ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ, ಎ೦ಬ ಆಶಯದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.





welcome to school


ಪುಟಾಣಿಗಳೇ ಸ್ವಾಗತ ಸುಸ್ವಾಗತ