Thursday 2 July 2015

ವಾಚನಾವಾರ -19/6/2015


ವಾಚನಾವಾರ -19/6/2015
          "ಓದಿ ಬೆಳೆಯುವುದು,
              ಚಿಂತಿಸಿ ವಿವೇಚಿಸುವುದು.”
           ಈ ಘೋಷಣೆಯು ಪ್ರತೀ ವರ್ಷ ಜೂನ್ ೧೯ ರಂದು ಕೇಳಿ ಬರುತ್ತಿದೆ.ಪಿ.ಯನ್.ಪಣಿಕರ        ಚರಮ ದಿನವನ್ನು ನಾವು ವಾಚನಾದಿನವೆಂದು ಆಚರಿಸುತ್ತಿದ್ದೇವೆ.ಪಿ.ಯನ್.ಪಣಿಕ್ಕರ್ ಓದುವಿಕೆಗೆ ಪ್ರೋತ್ಸಾಹಿಸಿ ಒಂದು ಗ್ರಂಥಾಲಯವನ್ನು ಸ್ಥಾಪಿಸಿದರು.ಈ ಮೂಲಕ ಎಲ್ಲರೂ ಓದಿ ಓದಿ ಬೆಳೆಯಬೇಕೆಂದು ಕರೆಯಿತ್ತರು ಬೆಳೆಯುವ ಸಿರಿ ಮೊಳಕೆಯಲ್ಲೇ ಎ೦ಬ ಗಾದೆಯಂತೆ ಮಕ್ಕಳಿಂದಲೇ ಈ ಕಾರ್ಯ ಪ್ರಾರಂಭವಾಗಬೇಕೆಂಬ ನೆಲೆಯಲ್ಲಿ ಶಾಲೆಗಳಲ್ಲಿ ಒಂದು ವಾರವನ್ನು (19ರಿಂದ 25 ರವರೆಗೆ ) ವಾಚನಾವಾರವೆಂದು ಆಚರಿಸುವುದು.ಈ ಕಾರ್ಯಕ್ರಮ ಮಕ್ಕಳಲ್ಲಿ ಓದುವಿಕೆಯ ಕಲೆಯನ್ನು ಬೆಳೆಸಲು ಪ್ರೇರೇಪಿಸುವಂತಿರಬೇಕು.ಆಗಲೇ ಪಿ.ಯನ್.ಪಣಿಕ್ಕರ ಕನಸು ನನಸಾದೀತು.
         ಜೂನ್ 19 ಶುಕ್ರವಾರ 10 ಗಂಟೆಗೆ ಸರಿಯಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾದ ಮುಳಿಂಜದಲ್ಲಿ ವಾಚನಾದಿನ ಕಾರ್ಯಕ್ರಮ ಪ್ರಾರಂಭವಾಯಿತು.ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಪುಸ್ತಕದಿಂದ ಒಂದನ್ನು ಆಯ್ದು ಮಗು ಓದುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ನಂತರ "ಅಕ್ಷರ ಗಂಗೆ " ಎ೦ಬ ವಾಚನಾ ಕ್ಯಾಲೆಂಡರ್ ನ್ನು ಪ್ರದರ್ಶಿಸಿ ,ಓದಿ ಹೇಳಲಾಯಿತು.ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಟೀಚರ್ ಎಲ್ಲರನ್ನು ಸ್ವಾಗತಿಸಿ ,ವಾಚನಾವಾರದ ಮಹತ್ವ ವಿವರಿಸಿದರು.ಇಸಾಕ್ ಮಾಸ್ಟರ್ ಧನ್ಯವಾದವಿತ್ತರು.ಒಟ್ಟು 5 ದಿನಗಳ ಕಾರ್ಯಕ್ರಮ ನಡೆದಿದ್ದು ,I,II ನೇ ತರಗತಿಯವರಿಗೆ ಚಿತ್ರ ರಚನೆ,ಕತೆ ಓದುವುದು,ಶಿಶುಗೀತೆ,ಚಿತ್ರ ಓದುವುದು.III ಮತ್ತು IV ನೇ ತರಗತಿಯವರಿಗೆ ಕತೆ ರಚನೆ,ಲೇಖಕರ ಪಟ್ಟಿ ತಯಾರಿ,ರಸಪ್ರಶ್ನೆ,ಕತೆ ಹೇಳುವ ಸ್ಪರ್ಧೆಗಳು ನಡೆಯಿತು.25-6-2015 ರ ಗುರುವಾರ ಮಧ್ಯಾಹ್ನ ನಂತರ 3 ಗಂಟೆಗೆ ಸರಿಯಾಗಿ ಸಮಾರೋಪ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಯಿತು.