Thursday 28 January 2016

ಮೆಟ್ರಿಕ್ ಮೇಳಃ 26/01/2016



 ಮೆಟ್ರಿಕ್ ಮೇಳಃ 26/01/2016

 



ತಾಃ26/01/201610.30 ಗಂಟೆಗೆ ಸರಿಯಾಗಿ ನಮ್ಮ ಶಾಲೆಯಲ್ಲಿ ನಂತರ ಮೆಟ್ರಿಕ್ ಮೇಳದ ತಯಾರಿ ನಡೆಸಿದೆವುಮುಖ್ಯೋಪಾಧ್ಯಾಯರು ಅದರ ಬಗ್ಗೆ ವಿವರಿಸಿದರುಮಲಯಾಳದಲ್ಲಿ ಸುರೇಶ್ ಮಾಸ್ಟರ್ ವಿವರಣೆ ನೀಡಿದರು.


ಗಡಿಯಾರದ ಸಮಯದ ಕುರಿತಾಗಿ ವಿವರಿಸಿಎಲ್ಲರೂ ಒಂದೊಂದು ಗಡಿಯಾರ ನಿರ್ಮಿಸಬೇಕು ಎ೦ದು ಹೇಳುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮೊದಲಿಗೆ ಮಕ್ಕಳಿಗೆ ಗುಂಪುಗಳಾಗಿ ಮಾಡಿ ಬೇಕಾದ ಸಲಕರಣೆಗಳನ್ನು ನೀಡಿ ಅವರಿಗೆ ಬೇಕಾದ ಆಕೃತಿಯ ಗಡಿಯಾರ ನಿರ್ಮಿಸಲಾಯಿತುನಂತರ ಕಾರ್ಡ್ ಬೋರ್ಡ್ ನಲ್ಲಿ ಮೀಟರ್ ಸ್ಕೇಲ್ ಮತ್ತು ತೂಕದ ಕಲ್ಲುಗಳನ್ನು ಮಾಡಲಾಯಿತು.ಮಕ್ಕಳಿಗೆ ಇದರಿಂದ ವಸ್ತು ಗಳ ಅಳತೆಗಳನ್ನು ನೋಡಲು ತಿಳಿಯಿತು.ಮರುದಿನ ಅಳತೆ ಪಾತ್ರೆಯನ್ನು ಲೀಟರುಗಳಾಗಿ ಅಳತೆ ಮಾಡಿ ಬಾಟ್ಲಿಯಲ್ಲಿ ಕತ್ತರಿಸಿ ಮಾಡಲಾಯಿತುನಂತರ ಗುಂಪಿನಲ್ಲಿ ಜನ್ಮದಿನ ಕ್ಯಾಲೆಂಡರ್ ತಯಾರಿಸಿದರುಒಂದೊಂದು ತಿಂಗಳುಗಳ ಎಲ್ಲರ ಜನ್ಮ ದಿನಾಂಕ ಮತ್ತು ವಿಶೇಷ ದಿನಗಳನ್ನು ಬರೆದು ಜನ್ಮದಿನ ಕ್ಯಾಲೆಂಡರ್ ತಯಾರಿಸಿದರುಇದಕ್ಕೆ ಬೇಕಾದ ಸಹಾಯವನ್ನು ಅಧ್ಯಾಪಕರು ನೀಡಿದರುಹೀಗೆ ಗಡಿಯಾರಮೀಟರ್ ಸ್ಕೇಲ್ಮೆಟ್ರಿಕ್ ಗಡಿಯಾರಅಳತೆ ಪಾತ್ರೆತೂಕದ ಕಲ್ಲುಲೀಟರು ಜನ್ಮದಿನ ಕ್ಯಾಲೆಂಡರ್ಗಳು  ಮೆಟ್ರಿಕ್ ಕಾರ್ಯಗಾರದಉತ್ಪನ್ನಗಳಾಗಿ ಹೊರ ಬಂದವುಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ಅದರ ಸದುಪಯೋಗ ಪಡೆದುಕೊಂಡರು.

ಪ್ರಜಾ ಪ್ರಭುತ್ವ ದಿನಾಚರಣೆಃ 26/01/2016


ಪ್ರಜಾ ಪ್ರಭುತ್ವ ದಿನಾಚರಣೆಃ 26/01/2016


 ತಾಃ26/01/2016 ಪ್ರಜಾ ಪ್ರಭುತ್ವ ದಿನಾಚರಣೆ 10 ಗಂಟೆಗೆ ಸರಿಯಾಗಿ ನಮ್ಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ರವೀಂದ್ರ ಮಾಸ್ಟರಅಧ್ಯಾಪಕರು ಮತ್ತು ಪಿ.ಟಿ. ಪ್ರೆಸಿಡೆಂಟ್ ಉಪಸ್ಥಿತರಿದ್ದರುಪಿ.ಟಿ. ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ಧ್ವಜಾರೋಹಣ ಗೈದರು.

 

ಮಕ್ಕಳಿಗೆ ಶುಭವನ್ನು ಹಾರೈಸಿದರುಅಲ್ಲದೆ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಗಣರಾಜ್ಯೋತ್ಸವದ ಕುರಿತಾಗಿ ವಿವರಣೆ ನೀಡಿದರುನಂತರ ಮಕ್ಕಳಿಗೆ ಸಿಹಿ ತಿಂಡಿ ಹಂಚುವುದರೊಂದಿಗೆ ಧನ್ಯವಾದವನ್ನರ್ಪಿಸಿದರು. ಮಧ್ಯಾಹ್ನ 12.30  ವೇಳೆ ಅಂಗನವಾಡಿಯ ಪರವಾಗಿ ಮಕ್ಕಳಿಗೆ ಪಾಯಸ ವಿತರಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.

Sunday 24 January 2016

ಶಾಲಾ ಶೈಕ್ಷಣಿಕ ಪ್ರವಾಸ -20/01/2016


ಶಾಲಾ ಶೈಕ್ಷಣಿಕ ಪ್ರವಾಸ - 20/01/2016

ತಾಃ 20/1/2016  ಬೆಳಿಗ್ಗೆ 9.೦೦ ಗಂಟೆಗೆ ಸರಿಯಾಗಿ ಸರಕಾರಿ ಕಿರಿಯ ಶಾಲೆ ಮುಳಿಂಜದಿಂದ
 34 ಮಕ್ಕಳೂ ಮತ್ತು 10 ಅಧ್ಯಾಪಕರು ಪ್ರವಾಸ ಹೊರಟರು. ಉಪ್ಪಳದಿಂದ ಬೇರೆ ಬಸ್ಸಿನಲ್ಲಿ ತಲಪಾಡಿಗೆ ತಲುಪಿದೆವುಅಲ್ಲಿಂದ ಐಷಾರಾಮದಿಂದ ಕೂಡಿದ ಮಹಾ ಗಣಪತಿ ಬಸ್ಸಿನಲ್ಲಿ ಹೊರಟು ಮೊದಲು ಪಿಲಿಕುಳಕ್ಕೆ ತಲುಪಿದೆವು. ಅಲ್ಲಿ ಒಂದು ದಾರಿಯ ಮದ್ಯದಲ್ಲಿ ಇಡ್ಲಿಸಾಂಬಾರುಶರಬತ್ತಿನ ಲಘು ಉಪಹಾರ ನಡೆಯಿತುನಂತರ ಪಿಲಿಕುಳಕ್ಕೆ ಹೋಗಿ ಅಲ್ಲಿನ ಪ್ರಾಣಿ, ಪಕ್ಷಿ ಹಾಗೂ ವಿವಿಧ ತರಹದ ಹಾವುಗಳನ್ನು ವೀಕ್ಷಿಸಿದೆವುಕೆಲವು ಪ್ರಾಣಿಗಳು ಓಡಿ ಬಂದು ಪೋಟೋ ತೆಗೆಯಲು ನಮ್ಮನ್ನು ಪ್ರೇರೇಪಿಸುತ್ತಿದ್ದುವುಕರಡಿಯು ಪೋಟೋ ತೆಗೆಯಲು ಬೇರೆ ಬೇರೆ ರೀತಿಯಲ್ಲಿ ನಿಲ್ಲುತ್ತಿತ್ತುಅಲ್ಲಿ ಸುಮಾರು ಎರಡು ಗಂಟೆಗೆಳ ತನಕ ಸುತ್ತಾಡಿ ಖುಷಿ ಪಟ್ಟರು.



                               









                           


                           



                         

                 




ನಂತರ ಬಸ್ಸಿನಲ್ಲಿ ಸ್ವಲ್ಪ ದೂರ ಹೋಗಿ ಮಧ್ಯಾಹ್ನದ ಊಟ ಮಾಡಿನಂತರ ಅಲ್ಲಿಂದ ಪಿಲಿಕುಳದ ಪಾರ್ಕಿಗೆ ಹೋದೆವು. ಅಲ್ಲಿ ಮಕ್ಕಳು ಅಧ್ಯಾಪಕರು ಸುತ್ತಾಡಿದೆವು. ಅಲ್ಲಿ ಕುಳಿತು ಪೋಟೋ ತೆಗೆದೆವು. ಅಲ್ಲಿರುವ ಮೀನುಗಳಿರುವ ಎಕ್ವೇರಿಯಂ ನೋಡಿದೆವು. ಕರಿಮೀನು, ವೆಸ್ಟರ್ನ್ ಘಾಟ್ಸ್ ಹೀಗೆ ಬೇರೆ ಬೇರೆ ತರದ ಮೀನುಗಳು ಇದ್ದವು. ಅಲ್ಲದೆ ಮಕ್ಕಳು ಅಧ್ಯಾಪಕರು ಎಲ್ಲರೂ ಬೋಟ್ ನಲ್ಲಿ ಹೋದೆವು. ಕೆಲವು ಮಕ್ಕಳಿಗೆ ಭಯದಿಂದಲೂ, ಕೆಲವು ಸಂತೋಷದಿಂದ ಬೋಟಿಂಗ್ ನಡೆಸಿದರು. ಅಲ್ಲಿಂದ ಬರಲು ಮಕ್ಕಳಿಗೆ ಮನಸ್ಸೇ ಇರಲಿಲ್ಲ. 3.3 ಗಂಟೆಗೆ ಅಲ್ಲಿಂದ ಹೊರಟೆವು. ಬಸ್ಸಲ್ಲಿ ಹಾಸ್ಯ, ನಗು, ಡ್ಯಾನ್ಸ್ ಗಳೊಂದಿಗೆ ಸೋಮೇಶ್ವರ ಬೀಚಿಗೆ ತಲುಪಿದೆವು. ಅಲ್ಲಿ ಬಂಡೆಕಲ್ಲಿನ ಮೇಲೆ ಹತ್ತಿ, ಸಮುದ್ರದಲ್ಲಿ ಮಕ್ಕಳು ಅಲ್ಲಿ ಆಟವಾಡಿ ಸಂತೋಷಪಟ್ಟರು. ಅಲ್ಲಿಂದ ಸಂಜೆ 4 ಗಂಟೆಗೆ ಹಿಂತಿರುಗಿದೆವು. ತಲಪಾಡಿಗೆ ತಲುಪಿ ಅಲ್ಲಿಂದ ಬೇರೆ ಬಸ್ಸಲ್ಲಿ 5.3 ಗಂಟೆಯ ಹೊತ್ತಿಗೆ ಶಾಲೆಗೆ ತಲುಪಿದೆವು. ಮಕ್ಕಳು ಅವರವರ ಹೆತ್ತವರೊಡನೆ ಮನೆಗೆ ತಲುಪಿದರು. ಮಕ್ಕಳ ಮನಸ್ಸಿನ ತುಂಬಾ ರಸ ನಿಮಿಷಗಳು ತುಂಬಿತ್ತು.

Thursday 14 January 2016

ಶಾಲಾ ಮಟ್ಟದ ವಿದ್ಯಾರಂಗ 2015-16


ಶಾಲಾ ಮಟ್ಟದ ವಿದ್ಯಾರಂಗ 2015-16  -13/01/2016




ತಾಃ13/01/2016 ನೇ ಬುಧವಾರ 10 ಗಂಟೆಗೆ ಸರಿಯಾಗಿ ಶಾಲಾ ಅಸೆಂಬ್ಲಿ ಯಲ್ಲಿ ಶಾಲಾ ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ಶಾಲಾ ಮಟ್ಟದ ವಿದ್ಯಾರಂಗ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಕ್ಕಳಿಗೆ ಶುಭವನ್ನು ಹಾರೈಸಿದರು.ತದ ನಂತರ ಕ್ರಮ ಪ್ರಕಾರವಾಗಿ ಕಥಾ ರಚನೆ,ಕವಿತಾ ರಚನೆ,ಚಿತ್ಕ ರಚನೆ ಮತ್ತು ಜಾನಪದ ಹಾಡಿನ ಸ್ಪರ್ಧೆ ನಡೆಯಿತು.ತರಗತಿ ಮಟ್ಟದಲ್ಲಿ ಪ್ರಥಮ,ದ್ವಿತೀಯ ಮತ್ತು ತೃತೀಯ ಸ್ಥಾನಗಳ III ಮತ್ತು IV ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧಿಸಿದರು.ಕಥಾ ರಚನೆಯಲ್ಲಿ ಫೈಮಾನ ಬಾನು ಮತ್ತು ಹರ್ಷಿತ್, ಕವಿತಾ ರಚನೆಯಲ್ಲಿ ಕದೀಜತ್ ಹಮ್ನಾ ಮತ್ತು ಫಾತಿಮತ್ ಸುನೈನ, ಚಿತ್ರ ರಚನೆಯಲ್ಲಿ ಯಶ್ವಿಜ ಮತ್ತು ರಿತೇಶ್ ಆಯ್ಕೆಯಾದರು.ಇವರು 15/01/2016 ರಂದು ನಡೆಯಲಿರುವ ಪಂಚಾಯತ್ ಮಟ್ಟದ ವಿದ್ಯಾರಂಗ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.ಸಂಜೆ ಮಕ್ಕಳ ರಚನೆಗಳನ್ನೊಳಗೊಂಡ ಸೃಷ್ಟಿ ಎ೦ಬ ಹಸ್ತ ಪತ್ರಿಕೆಯನ್ನು ಶಾಲಾ ಮುಖ್ಯೋಪಾಧ್ಯಾಯರು ಬಿಡುಗಡೆಗೊಳಿಸಿ ಮಕ್ಕಳಿಗೆ ಶುಭ ಹಾರೈಸಿದರು.ಇಲ್ಲಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.