Monday, 9 November 2015


 ಶುಚಿತ್ವ ಮಾಸ -15/10/2015
 
      
















ತಾಃ 15/10/2015 ರ ಗುರುವಾರದಂದು ಶುಚಿತ್ವ ದಿನ ನಡೆಸಲಾಯಿತು.ಮೊದಲಿಗೆ ಎಲ್ಲಾ ಮಕ್ಕಳನ್ನು ಸೇರಿಸಿ ಕೈಗಳನ್ನು ಶುಚಿಗೊಳಿಸುವ ಆರು ಹಂತಗಳನ್ನು ಹೇಳಿ ಕೊಟ್ಟು ಕೈಗಳ ಶುಚಿತ್ವದ ಮಹತ್ವವನ್ನು ಸುರೇಶ್ ಮಾಸ್ಟರ್ ವಿವರಿಸಿ ನಂತರ ಎಲ್ಲಾ ಮಕ್ಕಳು ಅದೇ ರೀತಿ ತಮ್ಮ ಕೈಗಳನ್ನು ಸಾಬೂನು ಉಪಯೋಗಿಸಿ ತೊಳೆದು ಶುಚಿಗೊಳಿಸಿದರು. 
 

 
 












ಕೈ ತೊಳೆದ ನಂತರ ಕೈಗಳ ಶೃಂಖಲೆ ಮಾಡಿ ಶುಚಿತ್ವದ ಪ್ರತಿಜ್ಞೆ ಹೇಳಿದರು.ಶುಚಿತ್ವ ಪಾಲನೆ ನನ್ನ ಅತ್ಯಮೂಲ್ಯ ಕರ್ತವ್ಯ .ನಾನು ಊಟಕ್ಕಿಂತ ಮೊದಲು ,ಪಾಯಿಖಾನೆಗೆ ಹೋಗಿ ಬಂದ ನಂತರ ಕೈಗಳನ್ನು ಸಾಬೂನು ಹಾಕಿ ಚೆನ್ನಾಗಿ ತೊಳೆಯುವೆ ,ಶುಚಿತ್ವವನ್ನು ಯಾವಾಗಲೂ ಕಾಪಾಡುವೆ ಎ೦ದು ಈ ಮೂಲಕ ಪ್ರತಿಜ್ಞೆ ಗೆಯ್ಯುವೆನು.



ಪ್ರತಿಜ್ಞೆಯ ಬಳಿಕ ತರಗತಿಯಲ್ಲಿ ಕುಳಿತು ಪೋಸ್ಟರ್ ತಯಾರಿಸಲು ಹೇಳಲಾಯಿತು. ಇದಕ್ಕೆ ಬೇಕಾದ ಮಾಹಿತಿ ಮಾರ್ಗದರ್ಶನ ಗಳನ್ನು  ಅಧ್ಯಾಪಕರು ನೀಡಿದರು.ಎಲ್ಲಾ ಗುಂಪಿನಿಂದಲೂ ಉತ್ತಮ ಪೋಸ್ಟರ್ ತಯಾರಾಯಿತು.ಎಲ್ಲಾ ಮಕ್ಕಳಿಗೆ ಶುಚಿತ್ವದ ಮಹತ್ವ ,ಅರಿವು ಮೂಡಿತು.

No comments:

Post a Comment