ಸಮವಸ್ತ್ರ
ವಿತರಣೆ -14/07/2015
“ಕಾನೂನಿನ
ಮುಂದೆ ಎಲ್ಲರೂ ಸಮಾನರು,ಅಂಗ,ಜಾತಿ,ಅಂತಸ್ತುಗಳ
ಭೇದವಿಲ್ಲ”ಹೀಗೆ ನಮ್ಮ ಭಾರತದ
ಸಂವಿಧಾನ ಹೇಳುತ್ತಿದೆ.ಶಾಲೆಗಳಲ್ಲಿ
ಕಲಿಯುವ ಮಕ್ಕಳಲ್ಲಿ ಬಡವ -ಶ್ರೀಮಂತ
,ಜಾತಿ-
ಮೇಲ್ಜಾತಿಯವರೂ
ಇರುತ್ತಾರೆ.ಅವರವರ
ಮಟ್ಟಕ್ಕೆ ಅನುಸರಿಸಿ ಬಟ್ಟೆ
ಬರೆಗಳನ್ನು ಧರಿಸಿ ಬಂದಾಗ, ಏನು
ಇಲ್ಲದ ಮಕ್ಕಳ ಮನಸ್ಸಿಗೆ
ಬೇಸರವಾಗುತ್ತದೆ.
ನಾನು
ಬಡವ ಎ೦ಬ ಭಾವನೆ ಬೆಳೆದು ಕುಗ್ಗು ತ್ತಾ
ಹೋಗುತ್ತಾರೆ.
ಇದಕ್ಕಾಗಿ
ಶಾಲೆಗಳಲ್ಲಿ ಎಲ್ಲಾ ಮಕ್ಕಳು
ಸಮಾನರಾಗಿ ಇರಬೇಕೆಂಬ ದೃಷ್ಟಿ ಯಿಂದ
ಸಮವಸ್ತ್ರದ ಯೋಜನೆ ಜಾರಿಗೆ
ಬಂದಿದೆ.ಸರಕಾರದಿಂದ
ದೊರೆತ ಶಾಲೆಗಳಲ್ಲಿ ನೀಡಿದ
ಸಮವಸ್ತ್ರವನ್ನು ಎಲ್ಲರೂ ಧರಿಸಿದರೆ
ನನ್ನಲ್ಲಿ ಇದೆ,ಇಲ್ಲ
ಎ೦ಬ ತಾರತಮ್ಯಗಳು ದೂರವಾಗಿ
ಸಮಾನ ರಾಗಿ ಒಂದಾಗಿ ಕತಿಯಲು ಅವಕಾಶ
ಸಿಗುತ್ತದೆ.ಅನೇಕ
ಸಂಸ್ಥೆಗಳಲ್ಲಿ ಈ ಸಮವಸ್ತ್ರ
ಜಾರಿಯಲ್ಲಿದೆ. ಶಾಲೆಗೆ
ಸಂಬಂಧಿಸಿ ಮಕ್ಕಳಿಗೆ ಸಮವಸ್ತ್ರ
ಇದ್ದರೆ ನೋಡಲು ಅಂದ,ಶಿಸ್ತು
,ಸಮಾನತೆ
ಎಲ್ಲವೂ ಕಂಡು ಬರುತ್ತದೆ.
ತಾ-14/07/2015
ಮಂಗಳವಾರ೩
ಗಂಟೆಗೆ ಸರಿಯಾಗಿ ಸರಕಾರಿ ಕಿರಿಯ
ಪ್ರಾಥಮಿಕ ಶಾಲೆ ಯಾದ ಮುಳಿಂಜದಲ್ಲಿ
ಸಮವಸ್ರ್ತ ವಿತರಣೆ ಸಮಾರಂಭ
ನಡೆಯಿತು.ಈ
ಸಭೆಯಲ್ಲಿ ಅಧ್ಯಕ್ಷರಾಗಿ ಪಿ.ಟಿ.ಎ
ಪ್ರೆಸಿಡೆಂಟ್ ಚಂದ್ರಹಾಸ ಆಳ್ವ
ಉಪಸ್ಥಿತರಿದ್ದರು.ಈ
ಕಾರ್ಯಕ್ರಮದ ಉಧ್ಘಾಟನೆಯನ್ನು
ನೆರವೇರಿಸಬೇಕಾಗಿದ್ದ ಮಂಗಲ್ಪಾಡಿ
ಪಂಚಾಯತ್ ಉಪಾಧ್ಯಕ್ಷರಾದ ಅಲಿ
ಮಾಸ್ಟರಿಗೆ ಬರಲು ಅನಾನುಕೂಲವಾದ
ಕಾರಣ ನಮ್ಮ ಶಾಲಾ ಪಿ.ಟಿ.ಎ
ಪ್ರೆಸಿಡೆಂಟ್ ಚಂದ್ರಹಾಸ ಆಳ್ವ
ರವರು ಮ ಕ್ಕಳಿಗೆ ಸಮವಸ್ತ್ರವನ್ನು
ನೀಡಿ ಕಾರ್ಯಕ್ರಮವನ್ನು
ಉದ್ಘಾಟಿಸಿದರು.ಈ
ಕಾರ್ಯಕ್ರಮಕ್ಕೆ ಎಲ್ಲರನ್ನು
ರೇಣುಕಾ ಟೀಚರ್ ಸ್ವಾಗತಿಸಿದರು.
ಕಲಿಕೆಗೆ
ಮಕ್ಕಳಿಗೆ ಸಹಾಯವಾಗುವಂತೆ ಸರಕಾರ
ಸಮವಸ್ತ್ರ ವಿತರಿಸಿ ಮಕ್ಕಳನ್ನು
ಪ್ರೋತ್ಸಾಹಿಸುತ್ತಿದ್ದಾರೆ.
ಇದರ
ಲಾಭವನ್ನು ಪಡೆದು ಚೆನ್ನಾಗಿ
ಕಲಿತು ವಿದ್ಯಾವಂತರಾಗಿ ಎ೦ದು
ಶಾಲಾ ಮುಖ್ಯೋಪಾಧ್ಯಾಯರಾದ ರವೀಂದ್ರ
ಮಾಸ್ಟರ್ ಶುಭವನ್ನು ಹಾರೈಸಿದರು.
ಕೊನೆಗೆ
ಸುರೇಶ್ ಕುಮಾರ್ ಮಾಸ್ಟರ್
ಧನ್ಯವಾದದೊಂದಿಗೆ ಕಾರ್ಯಕ್ರಮ
ಮುಕ್ತಾಯಗೊಂಡಿತು.


No comments:
Post a Comment