Wednesday, 5 August 2015


ಬಾಲಸಭೆ -10/07/2015

  ಮಕ್ಕಳೆಂದರೆ ಖಾಲಿ ಪಾತ್ರೆಯಲ್ಲ.ಅನೇಕ ಪ್ರತಿಭೆ ,ವಿಚಾರ ,ವಿಷಯಗಳು ತುಂಬಿಕೊಂಡ ತುಂಬಿದ ಕೊಡ.ಈ ತುಂಬಿದ ಕೊಡ ತುಳುಕ ಬೇಕಾದರೆ ಅದಕ್ಕೊಂದು ಅವಕಾಶ ,ಸಂದರ್ಭ ಗಳು ಬೇಕು.ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಹಾಡು,ಬರವಣಿಗೆ ,ಅಭಿನಯ ,ನೃತ್ಯಗಳೆಂಬ ಕಲೆ ಗಳು ಅಡಗಿರುತ್ತದೆ.ಇದನ್ನು ಬೆಳಕಿಗೆ ತರಲು ಒಂದು ವೇದಿಕೆ ಬೇಕು.ಆ ವೇದಿಕೆಯೇ ಬಾಲ ಸಭೆ. ಬಾಲಸಭೆಯೆಂದರೆ ಬಾಲರ ಸಭೆ,ಕಾರ್ಯಕ್ರಮಗಳು.ಇದರಿಂದ ಮಕ್ಕಳೇ ಅಧ್ಯಕ್ಷರು, ನಿರೂಪಕರು.ಕಾರ್ಯದರ್ಶಿ,ಖಜಾಂಜಿಗಳಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.ಆಗ ಮಕ್ಕಳಲ್ಲಿ ಕಾರ್ಯಕ್ರಮಗಳನ್ನು ನಡೆಸುವ ಚಾತುರ್ಯವು ಬೆಳೆಯು ತ್ತದೆ. ಮುಂದೆ ಬರುವ ಅವಕಾಶಗಳು ಸಿಗುತ್ತದೆ.
  ತಾಃ10/07/2015ರ ಶುಕ್ರವಾರ ಮಧ್ಯಾಹ್ನ 3.00 ಗಂಟೆಗೆ ಸರಿಯಾಗಿ ಬಾಲಸಭೆ ಎ೦ಬ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಅಧ್ಯಕ್ಷರಾಗಿ ಶಾಲಾ ಮುಖ್ಯೋಪಾಧ್ಯಾಯರಾದ ರವೀಂದ್ರ ಮಾಸ್ಟರ್ ''ಎಲ್ಲರೂ ಮುಂದೆ ಬರಬೇಕು.ನಿಮ್ಮಲ್ಲಿರುವ ಅಂಜಿಕೆ ,ಹೆದರಿಕೆ ,ದೂರವಾಗಬೇಕು.ನಿಮ್ಮಲ್ಲಿರುವ ಪ್ರತಿಭೆಗಳನ್ನು ಇಲ್ಲಿ ಪ್ರಕಟಿಸಿ ಬೆಳೆಯುತ್ತಾ ಹೋಗಬೇಕು. ಎ೦ದು ಮಕ್ಕಳಿಗೆ ಶುಭವನ್ನು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ರೇಣುಕಾ ಟೀಚರ್ " ಮಕ್ಕಳಾದ ನಿಮ್ಮಲ್ಲಿ ಒಂದೊಂದು ಪ್ರತಿಭೆಗಳಿವೆ.ಅದು ನಿಮಗೆ ಗೊತ್ತಿಲ್ಲ.ಒಬ್ಬರು ಅವರ ಪ್ರತಿಭೆ ಪ್ರದರ್ಶಿಸಿದಾಗ ನಿಮ್ಮ ಸುಪ್ತವಾಗಿರುವ ಪ್ರತಿಭೆ ಬೆಳಕಿಗೆ ಬರಲು ಹಾತೊರೆಯುತ್ತದೆ.ಆ ಪ್ರತಿಭೆಯ ಪ್ರದರ್ಶನಕ್ಕೆ ಇದೊಂದು ವೇದಿಕೆ.ಎಲ್ಲರೂ ಮುಂದೆ ಬನ್ನಿ ಪ್ರತಿಭಾವಂತರಾಗಿ ಎ೦ದು ಹಾರೈಸಿದರು.ಸಾಹಿತ್ಯ ಸಭೆಯ ಕನ್ವೀನರ್ ಆದಂತಹ ಬುಶ್ರ ಟೀಚರ್ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮಗಳನ್ನು ನಿರೂಪಿಸಿದರು.ಈ ಸಲದ ಸಭೆಯ ಅಧ್ಯಕ್ಷರಾಗಿ ಬಿಪಿನ ೩ ನೇ ತರಗತಿ ,ಕಾರ್ಯದರ್ಶಿಯಾಗಿ ಫೈಮಾನ ಬಾನುಳನ್ನು ಆರಿಸಲಾಯಿತು.ನಂತರ ಮಕ್ಕಳಿಂದ ಹಾಡು,ಕವಿತೆ,ಕತೆ ಕಾರ್ಯಕ್ರಮಗಳು ನಡೆಯಿತು.ಹಾಡುಗಳೇ ಹೆಚ್ಚಾಗಿ ಕಂಡು ಬಂತು.ಕೊನೆಗೆ 4 ಗಂಟೆಗೆ ಜನಗಣಮನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

No comments:

Post a Comment