Tuesday, 4 August 2015


ವಿಜ್ಞಾನ ಕ್ಲಬ್ ರೂಪೀಕರಣ -10/07/2015



   ತಾಃ10/07/2015 ರ ಶುಕ್ರವಾರ ಮಧ್ಯಾಹ್ನ 3.೦೦ ಗಂಟೆಗೆ ಸರಿಯಾಗಿ ವಿಜ್ಞಾನ ಕ್ಲಬ್ ನ
ಉದ್ಘಾಟನಾ ಕಾರ್ಯಕ್ರಮ ನಡೆಯಿತು.
 ವಿಜ್ಞಾನ ಕ್ಲಬ್ ನ ಕನ್ವೀನರ್ ಆದ ಪುಷ್ಪಲತಾ.ಟೀಚರ್ ಎಲ್ಲರನ್ನು ಈ ಸಭೆಗೆ ಸ್ವಾಗತಿಸಿದರು.ಈ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ರವೀಂದ್ರ ಮಾಸ್ಟರ್ ಒಂದು ಪ್ರಯೋಗದ ಮೂಲಕ ಉದ್ಘಾಟಿಸಿದರು.ಕ್ಲಬ್ ನ ಮಹತ್ವವನ್ನು ವಿವರಿಸಿದರು.
  ಪ್ರಯೋಗದ ವಿವರಣೆಯನ್ನು "ಒಂದು ವಸ್ತುವಿನೊಳಗೆ ಏಕಕಾಲದಲ್ಲಿ ಎರಡು ವಸ್ತುಗಳು ಇರಲು ಸಾಧ್ಯವಿಲ್ಲ.ಆದ ಕಾರಣ ಗ್ಲಾಸಿನೊಳಗಿದ್ದ ಬಟ್ಟೆಯು ನೀರಿದ್ದ ಬಾಲ್ದಿಗೆ ಎಷ್ಟು ಸಲ ಒದ್ದೆಯಾಗಲಿಲ್ಲ.ವಾಯುವಿಗೂ ಒತ್ತಡವಿದೆ ಎ೦ದು ಪುಷ್ಪಲತಾ ಟೀಚರ್ ವಿವರಿಸಿದರು.
ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸ್ಟಾಫ್ ಸೆಕ್ರೆಟರಿ ರೇಣುಕಾ ಟೀಚರ್ ವಿಜ್ಞಾನ ಪವಾಡಗಳನ್ನು ವಿವರಿಸಿ ಅದರ ಲಾಭಗಳನ್ನು ತಿಳಿಸಿದರು.ಕ್ಲಬ್ ಗೆ ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಸುರೇಶ್ ಮಾಸ್ಟರ್ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಕೊನೆಯದಾಗಿ ಶ್ರುತಿ ಟೀಚರ್ ಧನ್ಯವಾದವಿತ್ತರು. ಈ ಕಾರ್ಯಕ್ರಮದಲ್ಲಿ ಕ್ಲಬ್ ನ ಸದಸ್ಯರನ್ನು ಆರಿಸಲಾಯಿತು.ಈ ಕ್ಲಬ್ ನ ಕಾರ್ಯದರ್ಶಿಯಾಗಿ ಫಾತಿಮತ್ ಸುನೈನ ಮತ್ತು ಜತೆ ಕಾರ್ಯದರ್ಶಿಯಾಗಿ ಅಫ್ಸತ್ ಹನಾ ಆಯ್ಕೆಯಾದರು.
3 ಮತ್ತು 4 ನೇ ತರಗತಿಯ ಎಲ್ಲಾ ಮಕ್ಕಳು ಈ ಕ್ಲಬ್ ನ ಸದಸ್ಯರಾದರು.ಕೊನೆಯಲ್ಲಿ ಕ್ಲಬ್ ನ ಸಭೆಯಲ್ಲಿ ಕುಳಿತು ಚರ್ಚಿಸಿ ಮುಂದಿನ ಕ್ಲಬ್ ಚಟುವಟಿಕೆಯ ದಿನಾಂಕವನ್ನು (ಚಾಂದ್ರದಿನ) 21/07/2015 ನಿಗದಿ ಪಡಿಸಿದರು.

No comments:

Post a Comment