Tuesday, 17 March 2015

ಮೆಟ್ರಿಕ್ ಕಾರ್ಯಗಾರ -19/2/2015


ಮೆಟ್ರಿಕ್ ಕಾರ್ಯಗಾರ -19/2/2015





        ತಾಃ19/02/2015 ರಿಂದ 20/2/2015 ರವರೆಗೆ ಎರಡು ದಿನಗಳ ಗಣಿತಕ್ಕೆ ಸಂಬಂಧ ಪಟ್ಟ ಕಾರ್ಯಗಾರ 10 ಗಂಟೆಗೆ ಸರಿಯಾಗಿ ನಮ್ಮ ಶಾಲೆಯಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಟೀಚರ್ ಗಡಿಯಾರದ ಸಮಯದ ಕುರಿ ತಾಗಿ ವಿವರಿಸಿ ,ಎಲ್ಲರೂ ಒಂದೊಂದು ಗಡಿಯಾರ ನಿರ್ಮಿಸಬೇಕು ಎ೦ದು ಹೇಳುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮೊದಲಿಗೆ ಮಕ್ಕಳಿಗೆ ಗುಂಪುಗಳಾಗಿ ಮಾಡಿ ಬೇಕಾದ ಸಲಕರಣೆಗಳನ್ನು ನೀಡಿ ಅವರಿಗೆ ಬೇಕಾದ ಆಕೃತಿಯ ಗಡಿಯಾರ ನಿರ್ಮಿಸಲಾಯಿತು. ಅದರೊಂದಿಗೆ ಒಂದು ದೊಡ್ಡ ಮೆಟ್ರಿಕ್ ಗಡಿಯಾರ ಮಾಡಲಾಯಿತು.ನಂತರ ಕಾರ್ಡ್ ಬೋರ್ಡ್ ನಲ್ಲಿ ಮೀಟರ್ ಸ್ಕೇಲ್ ಮತ್ತು ತೂಕದ ಕಲ್ಲುಗಳನ್ನು ಮಾಡಲಾಯಿತು.ಮಕ್ಕಳಿಗೆ ಇದರಿಂದ ವಸ್ತು ಗಳ ಅಳತೆಗಳನ್ನು ನೋಡಲು ತಿಳಿಯಿತು.ಮರುದಿನ ಅಳತೆ ಪಾತ್ರೆಯನ್ನು ಲೀಟರುಗಳಾಗಿ ಅಳತೆ ಮಾಡಿ ಬಾಟ್ಲಿಯಲ್ಲಿ ಕತ್ತರಿಸಿ ಮಾಡಲಾಯಿತು. ನಂತರ ಗುಂಪಿನಲ್ಲಿ ಜನ್ಮದಿನ ಕ್ಯಾಲೆಂಡರ್ ತಯಾ ರಿಸಿದರು.ಒಂದೊಂದು ತಿಂಗಳುಗಳ ಎಲ್ಲರ ಜನ್ಮದಿನಾಂಕ ಮತ್ತು ವಿಶೇಷ ದಿನಗಳನ್ನು ಬರೆದು ಜನ್ಮದಿನ ಕ್ಯಾಲೆಂಡರ್ ತಯಾರಿಸಿದರು.ಇದಕ್ಕೆ ಬೇಕಾದ ಸಹಾಯವನ್ನು ಅಧ್ಯಾಪಕರು ನೀಡಿದರು. ಹೀಗೆ ಗಡಿಯಾರ ,ಮೀಟರ್ ಸ್ಕೇಲ್,ಮೆಟ್ರಿಕ್ ಗಡಿಯಾರ ,ಅಳತೆ ಪಾತ್ರೆ,ತೂಕದ ಕಲ್ಲು, ಜನ್ಮದಿನ ಕ್ಯಾಲೆಂಡರ್ ಗಳು ಈ ಮೆಟ್ರಿಕ್ ಕಾರ್ಯಗಾರದ ಉತ್ಪನ್ನಗಳಾಗಿ ಹೊರ ಬಂದವು.ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ಅದರ ಸದುಪಯೋಗ ಪಡೆದುಕೊಂಡರು.


No comments:

Post a Comment