Tuesday, 17 March 2015

ಶಾಲಾ ವಾರ್ಷಿಕೋತ್ಸವ -10/03/2015


ಶಾಲಾ ವಾರ್ಷಿಕೋತ್ಸವ -10/03/2015




ತಾಃ10/03/2015 ರ ಮಂಗಳವಾರ ಬೆಳಿಗ್ಗೆ 9.30 ಗಂಟೆಗೆ ನಡೆದ ಧ್ವಜಾರೋಹಣದೊಂದಿಗೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ಪ್ರಾರಂಭವಾಯಿತು.ಶಾಲಾ ಪಿ.ಟಿ.ಎ ಪ್ರೆಸಿಡೆಂಟ್ ಆದ ಶ್ರೀ ಚಂದ್ರಹಾಸ ಆಳ್ವ ಧ್ವಜಾರೋಹಣ ಗೈದರು.ಮಧ್ಯಾಹ್ನ ಊಟದ ನಂತರ2.30 ಗಂಟೆಯಿಂದ ಸಭಾ ಕಾರ್ಯಕ್ರಮಕ್ಕೆ ಮೊದಲು ಸ್ವಾಗತ ನೃತ್ಯವನ್ನು ಮಾಡಿ ಎಲ್ಲರನ್ನು ಸ್ವಾಗತಿಸಲಾಯಿತು.ಅಲ್ಲದೆ IV ನೇ ಮತ್ತು III ನೇ ತರಗತಿಯ ಮಕ್ಕಳಿಂದ "ನಿಸರ್ಗ"ಎ೦ಬ ಕಿರು ನಾಟಕ ನಡೆಯಿತು.ನಂತರ 3.೦೦ ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.


 

 ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಎ೦.ಕೆ.ಅಲಿ ಮಾಸ್ಟರ್ (ವೈಸ್ ಪ್ರೆಸಿಡೆಂಟ್ ಮಂಗಲ್ಪಾಡಿ ಗ್ರಾಮ ಪಂಚಾಯತ್) ಅಧ್ಯಕ್ಷರಾಗಿ ಶ್ರೀ ವಿಜಯಕುಮಾರ್ ಸರ್ (ಬಿ.ಪಿ.ಒ ಬಿ.ಆರ್.ಸಿ ಮಂಜೇಶ್ವರ) ಉಪಸ್ಥಿತರಿದ್ದರು.ಈ ಕಾರ್ಯಕ್ರಮಕ್ಕೆ ಶ್ರೀ.ನಂದಿಕೇಶನ್ ಸರ್ (ಅಸಿಸ್ಟೆಂಟ್ ಎಜುಕೇಶನಲ್ ಆಫೀಸರ್ ,ಮಂಜೇಶ್ವರ), ಶ್ರೀ ಚಂದ್ರಹಾಸ ಆಳ್ವ (ಪಿ.ಟಿ.ಎ ಪ್ರೆಸಿಡೆಂಟ್) , ಶ್ರೀಮತಿ ಇಂದಿರಾಕ್ಷಿ (ಎ೦.ಪಿ.ಟಿ.ಎ ಪ್ರೆಸಿಡೆಂಟ್),ಮೋಹನ್ ದಾಸ್ (ರಿಟಾರ್ಡ್ ಪೋಸ್ಟ್ ಮಾಸ್ಟರ್),ರಾಧಾಕೃಷ್ಣ ಸರ್(ರಿಟಾರ್ಡ್ ಮುಖೋಪಾಧ್ಯಾಯರು) ಶುಭವನ್ನು ಹಾರೈಸಿದರು.ಶಾಲೆಯ ಕಾರ್ಯಕ್ರಮಗಳನ್ನು ಹೊತ್ತ ನೆರಳು ಎ೦ಬ ಹಸ್ತ ಪತ್ರಿಕೆಯನ್ನು ಶ್ರೀ ಎ೦.ಕೆ.ಅಲಿ ಮಾಸ್ಟರ್ (ವೈಸ್ ಪ್ರೆಸಿಡೆಂಟ್ ಮಂಗಲ್ಪಾಡಿ ಗ್ರಾಮ ಪಂಚಾಯತ್) ಶ್ರೀ.ನಂದಿಕೇಶನ್ ಸರ್ (ಅಸಿಸ್ಟೆಂಟ್ ಎಜುಕೇಶನಲ್ ಆಫೀಸರ್ ,ಮಂಜೇಶ್ವರ)ರವರಿಗೆ ಕೊಡುವುದರ ಮೂಲಕ ಉದ್ಘಾಟಿಸಿದರು. 



ಅಲ್ಲದೆ ಈ ಕಾರ್ಯಕ್ರಮದಲ್ಲಿ ರಕ್ಷಕರಿಗೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಹೆತ್ತವರಿಗೆ ವೇದಿಕೆಯಲ್ಲಿರುವ ಗಣ್ಯರು ಬಹುಮಾನ ವಿತರಿಸಿದರು. 

 ಈ ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ರೇಣುಕಾ ಟೀಚರ್ ಸ್ವಾಗತವನ್ನು ಮತ್ತು ಧನ್ಯವಾದವನ್ನು ಶ್ರುತಿ ಟೀಚರ್ ನಿರ್ವಹಿಸಿದರು.ವಾರ್ಷಿಕ ವರದಿಯನ್ನು ಎಸ್.ಆರ್.ಜಿ ಕನ್ವೀನರ್ ಪುಷ್ಪಪಲತ ಟೀಚರ್ ವಾಚಿಸಿದರು.ಈ ಕಾರ್ಯಕ್ರಮವನ್ನು ಇಸಾಕ್ ಮಾಸ್ಟರ್ ನಿರೂಪಿಸಿದರು.ಸಭಾ ಕಾರ್ಯಕ್ರಮ ಮುಗಿದ ತರುವಾಯ 4.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮಕ್ಕಳ ನೃತ್ಯಗಳು ಪ್ರಾರಂಭವಾಯಿತು.














 ಮಕ್ಕಳ ವಿವಿಧ ನೃತ್ಯಗಳಿಂದ ಸೇರಿದ ಹೆತ್ತವರ ಕಣ್ ಮನ ಸಂತಸವಾಯಿತು.ಕೊನೆಗೆ 5.30 ಗಂಟೆಗೆ ಜನಗಣಮನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. 


No comments:

Post a Comment