Friday, 26 September 2014

ಮುಳಿಂಜ ಶಾಲಾ ಬ್ಲೋಗ್ ಉದ್ಘಾಟನೆ


ಮುಳಿಂಜ ಶಾಲಾ ಬ್ಲೋಗ್ ಉದ್ಘಾಟನೆ




ತಾ-25/09/2014 : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ತಾ-25/09/2014 ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಬ್ಲೋಗ್ ಉದ್ಘಾಟನಾ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ೦.ಪಿ.ಟಿ.ಎ ಪ್ರೆಸಿಡೆಂಟ್ ಶ್ರೀಮತಿ ಇಂದಿರಾಕ್ಷಿ ವಹಿಸಿಕೊಂಡಿದ್ದು ,ಮಂಗಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಮ್.ಕೆ ಅಲಿಮಾಸ್ಟರ್ ಕಂಪ್ಯೂಟರ್ ನಲ್ಲಿ ಬ್ಲೋಗ್ ಸೈಟನ್ನು ತೆರೆದು ತೋರಿಸುವ ಮುಖಾಂತರ ಉದ್ಘಾಟಿಸಿ,ಬ್ಲೋಗ್ ನ ಪ್ರಯೋಜನ ಮಹತ್ವಗಳನ್ನು ವಿವರಿಸಿ ಕಾರ್ಯಕ್ರಮ ಸಫಲಗೊಳ್ಳಲಿ ಎ೦ದು ಶುಭ ಹಾರೈಸಿದರು.ಕಾರ್ಯಕ್ರಮದ ಮುಖ್ಯ ಅತಿಥಿ ಬಿ.ಪಿ..ವಿಜಯಕುಮಾರ್ ಸರ್ (In-charge)ಬ್ಲೋಗ್ ನ ಸಂಪೂರ್ಣ ಮಾಹಿತಿ ನೀಡಿ,ಬ್ಲೋಗ್ ಶಾಲೆಯ ಸಾಧನೆಗಳ ಪ್ರತಿಫಲ.ಅದನ್ನು ಬೆಳಗಿಸಿ ಎ೦ದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷರಾದಶ್ರೀಮತಿ ಇಂದಿರಾಕ್ಷಿ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಅಲ್ಲದೆ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ.ರೇಣುಕಾ ಟೀಚರ್ ಸ್ವಾಗತ ಕೋರಿ ಇಸಾಕ್ ಸರ್ ಧನ್ಯವಾದವಿತ್ತರು.




ಹೋಮಿಯೋ ವೈದಕೀಯ ಶಿಬಿರ





ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ತಾ-25/09/2014 ಗುರುವಾರದಂದು ಬೆಳಿಗ್ಗೆ 11ಗಂಟೆಗೆ ಸರಿಯಾಗಿ ಹೋಮಿಯೋ ವೈದಕೀಯ ಶಿಬಿರದ ಉದ್ಘಾಟನಾ ಸಮಾರಂಭವು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ೦.ಪಿ.ಟಿ.ಎ ಪ್ರೆಸಿಡೆಂಟ್ ಶ್ರೀಮತಿ ಇಂದಿರಾಕ್ಷಿ ವಹಿಸಿಕೊಂಡಿದ್ದರು.ಮಂಗಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಮ್.ಕೆ ಅಲಿಮಾಸ್ಟರ್ ಹೋಮಿಯೋ ಗುಣಾವಶೇಷಗಳನ್ನು ವಿವರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಹಿದಾ ಯತ್ ನಗರದ ಆರೋಗ್ಯ ಕೇಂದ್ರದ ಡಾ.ಆಶ ಮೇರಿ ಮತ್ತು ಮಂಜೇಶ್ವರಆರೋಗ್ಯ ಕೇಂದ್ರದ ಡಾ.ಅಂಬಿಲಿ ಉಪಸ್ಥಿತರಿದ್ದರು.ಹೋಮಿಯೋದ ಪ್ರಯೋಜನಗಳನ್ನು ತಿಳಿಸಿ ಅದರ ಸದುಪಯೋಗ ಪಡೆದು ಕೊಳ್ಳಲು ತಿಳಿಸಿದರು.11.30 ರಿಂದ ಮಧ್ಯಾಹ್ನ 1.30 ಗಂಟೆಯ ತನಕ ಶಿಬಿರ ನಡೆದಿದ್ದು ೮೦ ರಷ್ಟು ಮಂದಿ ಇದರ ಲಾಭವನ್ನು ಪಡೆದರು.1.30 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಕ್ತಾಯಗೊಂಡಿತು.

No comments:

Post a Comment