ಪ್ರಜಾ ಪ್ರಭುತ್ವ ದಿನಾಚರಣೆಃ 26/01/2016
ತಾಃ26/01/2016 ಪ್ರಜಾ ಪ್ರಭುತ್ವ ದಿನಾಚರಣೆ 10 ಗಂಟೆಗೆ ಸರಿಯಾಗಿ ನಮ್ಮ ಶಾಲೆಯಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ರವೀಂದ್ರ ಮಾಸ್ಟರ, ಅಧ್ಯಾಪಕರು ಮತ್ತು ಪಿ.ಟಿ.ಎ ಪ್ರೆಸಿಡೆಂಟ್ ಉಪಸ್ಥಿತರಿದ್ದರು. ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ಧ್ವಜಾರೋಹಣ ಗೈದರು.
ಮಕ್ಕಳಿಗೆ ಶುಭವನ್ನು ಹಾರೈಸಿದರು. ಅಲ್ಲದೆ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಗಣರಾಜ್ಯೋತ್ಸವದ ಕುರಿತಾಗಿ ವಿವರಣೆ ನೀಡಿದರು. ನಂತರ ಮಕ್ಕಳಿಗೆ ಸಿಹಿ ತಿಂಡಿ ಹಂಚುವುದರೊಂದಿಗೆ ಧನ್ಯವಾದವನ್ನರ್ಪಿಸಿದರು. ಮಧ್ಯಾಹ್ನ 12.30 ರ ವೇಳೆ ಅಂಗನವಾಡಿಯ ಪರವಾಗಿ ಮಕ್ಕಳಿಗೆ ಪಾಯಸ ವಿತರಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.



No comments:
Post a Comment