ಶಾಲಾ ಶೈಕ್ಷಣಿಕ ಪ್ರವಾಸ - 20/01/2016
ತಾಃ 20/1/2016 ರ ಬೆಳಿಗ್ಗೆ 9.೦೦ ಗಂಟೆಗೆ ಸರಿಯಾಗಿ ಸರಕಾರಿ ಕಿರಿಯ ಶಾಲೆ ಮುಳಿಂಜದಿಂದ
34 ಮಕ್ಕಳೂ ಮತ್ತು 10 ಅಧ್ಯಾಪಕರು ಪ್ರವಾಸ ಹೊರಟರು. ಉಪ್ಪಳದಿಂದ ಬೇರೆ ಬಸ್ಸಿನಲ್ಲಿ ತಲಪಾಡಿಗೆ ತಲುಪಿದೆವು. ಅಲ್ಲಿಂದ ಐಷಾರಾಮದಿಂದ ಕೂಡಿದ ಮಹಾ ಗಣಪತಿ ಬಸ್ಸಿನಲ್ಲಿ ಹೊರಟು ಮೊದಲು ಪಿಲಿಕುಳಕ್ಕೆ ತಲುಪಿದೆವು. ಅಲ್ಲಿ ಒಂದು ದಾರಿಯ ಮದ್ಯದಲ್ಲಿ ಇಡ್ಲಿ, ಸಾಂಬಾರು, ಶರಬತ್ತಿನ ಲಘು ಉಪಹಾರ ನಡೆಯಿತು. ನಂತರ ಪಿಲಿಕುಳಕ್ಕೆ ಹೋಗಿ ಅಲ್ಲಿನ ಪ್ರಾಣಿ, ಪಕ್ಷಿ ಹಾಗೂ ವಿವಿಧ ತರಹದ ಹಾವುಗಳನ್ನು ವೀಕ್ಷಿಸಿದೆವು. ಕೆಲವು ಪ್ರಾಣಿಗಳು ಓಡಿ ಬಂದು ಪೋಟೋ ತೆಗೆಯಲು ನಮ್ಮನ್ನು ಪ್ರೇರೇಪಿಸುತ್ತಿದ್ದುವು. ಕರಡಿಯು ಪೋಟೋ ತೆಗೆಯಲು ಬೇರೆ ಬೇರೆ ರೀತಿಯಲ್ಲಿ ನಿಲ್ಲುತ್ತಿತ್ತು. ಅಲ್ಲಿ ಸುಮಾರು ಎರಡು ಗಂಟೆಗೆಳ ತನಕ ಸುತ್ತಾಡಿ ಖುಷಿ ಪಟ್ಟರು.




ನಂತರ ಬಸ್ಸಿನಲ್ಲಿ ಸ್ವಲ್ಪ ದೂರ ಹೋಗಿ ಮಧ್ಯಾಹ್ನದ ಊಟ ಮಾಡಿ, ನಂತರ ಅಲ್ಲಿಂದ ಪಿಲಿಕುಳದ ಪಾರ್ಕಿಗೆ ಹೋದೆವು. ಅಲ್ಲಿ ಮಕ್ಕಳು ಅಧ್ಯಾಪಕರು ಸುತ್ತಾಡಿದೆವು. ಅಲ್ಲಿ ಕುಳಿತು ಪೋಟೋ ತೆಗೆದೆವು. ಅಲ್ಲಿರುವ ಮೀನುಗಳಿರುವ ಎಕ್ವೇರಿಯಂ ನೋಡಿದೆವು. ಕರಿಮೀನು, ವೆಸ್ಟರ್ನ್ ಘಾಟ್ಸ್ ಹೀಗೆ ಬೇರೆ ಬೇರೆ ತರದ ಮೀನುಗಳು ಇದ್ದವು. ಅಲ್ಲದೆ ಮಕ್ಕಳು ಅಧ್ಯಾಪಕರು ಎಲ್ಲರೂ ಬೋಟ್ ನಲ್ಲಿ ಹೋದೆವು. ಕೆಲವು ಮಕ್ಕಳಿಗೆ ಭಯದಿಂದಲೂ, ಕೆಲವು ಸಂತೋಷದಿಂದ ಬೋಟಿಂಗ್ ನಡೆಸಿದರು. ಅಲ್ಲಿಂದ ಬರಲು ಮಕ್ಕಳಿಗೆ ಮನಸ್ಸೇ ಇರಲಿಲ್ಲ. 3.3೦ ಗಂಟೆಗೆ ಅಲ್ಲಿಂದ ಹೊರಟೆವು. ಬಸ್ಸಲ್ಲಿ ಹಾಸ್ಯ, ನಗು, ಡ್ಯಾನ್ಸ್ ಗಳೊಂದಿಗೆ ಸೋಮೇಶ್ವರ ಬೀಚಿಗೆ ತಲುಪಿದೆವು. ಅಲ್ಲಿ ಬಂಡೆಕಲ್ಲಿನ ಮೇಲೆ ಹತ್ತಿ, ಸಮುದ್ರದಲ್ಲಿ ಮಕ್ಕಳು ಅಲ್ಲಿ ಆಟವಾಡಿ ಸಂತೋಷಪಟ್ಟರು. ಅಲ್ಲಿಂದ ಸಂಜೆ 4 ಗಂಟೆಗೆ ಹಿಂತಿರುಗಿದೆವು. ತಲಪಾಡಿಗೆ ತಲುಪಿ ಅಲ್ಲಿಂದ ಬೇರೆ ಬಸ್ಸಲ್ಲಿ 5.3೦ ಗಂಟೆಯ ಹೊತ್ತಿಗೆ ಶಾಲೆಗೆ ತಲುಪಿದೆವು. ಮಕ್ಕಳು ಅವರವರ ಹೆತ್ತವರೊಡನೆ ಮನೆಗೆ ತಲುಪಿದರು. ಮಕ್ಕಳ ಮನಸ್ಸಿನ ತುಂಬಾ ರಸ ನಿಮಿಷಗಳು ತುಂಬಿತ್ತು.












No comments:
Post a Comment