Wednesday, 17 December 2014

ಸಾಕ್ಷರ ಘೋಷಣೆ - 12/12/2014


ಸಾಕ್ಷರ ಘೋಷಣೆ - 12/12/2014


          55 ಪ್ಯಾಕೇಜ್ ಗಳ ಸಾಕ್ಷರ ತರಗತಿ ತಾಃ4/12/2014 ರಂದು ಮುಗಿದು 5 ನೇ ತಾರೀಕಿನಂದು ಪ್ರಿಟೆಸ್ಟ್ ನಡೆಸಿದ್ದು ,ಮಕ್ಕಳು ಸಾಕ್ಷರರಾಗಿರುವರೆಂದು ಘೋಷಿಸುವ ಸಾಕ್ಷರ ಘೋಷಣೆಯನ್ನು ತಾಃ12/12/2014 ರಂದು ನಡೆಸಲಾಯಿತು.
ಮೊದಲಾಗಿ ಮಕ್ಕಳಿಂ ದ ಮೆರವಣಿಗೆ ನಡೆಸಲಾಯಿತು.,ಆ ಸ್ವರಾಕ್ಷರಗಳನ್ನು ಬರೆದಿರುವ ಫಲಕಗಳನ್ನು ಹಿಡಿ ದುಕೊಂಡು ಸಾಕ್ಷರ ಗೀತೆಯನ್ನು ಹಾಡಿಕೊಂಡು ಸಾಲಾಗಿ ನಡೆಯುವ ಮಕ್ಕಳ ಮುಂದೆ "ಸಾಕ್ಷರ-2014” ಎ೦ಬ ಬ್ಯಾನರ್ ಹಿಡಿದುಕೊಂಡು ಮೆರವಣಿಗೆ ಸಾಗಿತು. ಮೆರವಣಿಗೆ ಹೋ ಗಿ ಬಂದ ನಂತರ ಸಭಾ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ವಹಿಸಿಕೊಂಡಿದ್ದು ,ಈ ಕಾರ್ಯಕ್ರಮದ ನಿರೂ ಪಣೆಯನ್ನು IV ನೇ ತರಗತಿಯ ಸಾನಿಯ ವಹಿಸಿದರು.ಪ್ರಾರ್ಥನೆಯ ನಂತರ ಬಿ.ಪಿ.. ವಿಜಯಕುಮಾರ್ ಸರ್ ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿದರು.ಮಕ್ಕಳಿಗೆ ಸಾಕ್ಷ ರ ತರಗತಿಯ ಕುರಿತಾಗಿ ಕೆಲವು ವಿಷಯಗಳನ್ನು ತಿಳಿಸಿದರು. ನಂತರ "ಸಾಕ್ಷರ-2014” ಎ೦ದು ಬರೆದುದರ ಮೇಲೆ ಹಣತೆಗಳನ್ನು ಇಟ್ಟು ಅದನ್ನು ಮಕ್ಕಳು ಬೆಳಗಿಸಿದರು.ಅಲ್ಲದೆ ರವಿ IVನೇತರಗತಿ ಕರಿಹಲಗೆಯಲ್ಲಿ "ಸಾಕ್ಷರ-2014 ತರಗತಿಯಿಂದ ನಾನು ಓದಲು ಬರೆಯಲು ಕಲಿತೆ" ಎ೦ದು ಬರೆಯುವುದರ ಮೂಲಕ ಸಾಕ್ಷರ ಘೋಷಣೆಯನ್ನು ಮಾಡಿದನು. ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರ್ ,ಇಸಾಕ್ ಮಾಸ್ಟರ್ ಈ ಕಾರ್ಯಕ್ರಮಕ್ಕೆ ಶುಭಾಶಂಸನೆ ಗೈದರು.ಕೊನೆಗೆ ಪುಷ್ಪಲತಾ ಟೀಚರ್ ಧನ್ಯವಾದ ಹೇಳುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


No comments:

Post a Comment