ಜೂನ್
-1 ಎಲ್ಲೆಲ್ಲೂ
ಸಂಭ್ರಮ,ಸಡಗರ.ಪುಟಾಣಿ
ಮಕ್ಕಳು ಶಾಲೆಯ ಒಳಗೆ ಇಡುವ ಪುಟ್ಟ
ಹೆಜ್ಜೆಗಳ ಗಮ್ಮತ್ತು.
ಮಕ್ಕಳನ್ನು
ಸ್ವಾಗತಿಸಲು ಬಣ್ಣ ಬಣ್ಣದ
ಕಾಗದ,ಪುಗ್ಗೆಗಳ
ತಳಿರು ತೋರಣ. ಎಲ್ಲಾ
ಶಾಲೆಗಳಲ್ಲೂ ಪ್ರವೇಶೋತ್ಸವದ
ಸಂಭ್ರಮ.
ಜೂನ್- 1 ರಂದು ನಮ್ಮ ಶಾಲೆಯಲ್ಲಿ ಪ್ರವೇಶೋತ್ಸವ ಎ೦ಬ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು Rtd.ಮುಖ್ಯೋಪಾಧ್ಯಾಯಿನಿ ಯಾದ ಶ್ರೀಮತಿ.ಕಾಮೇಶ್ವರಿ ಯವರು ಮಕ್ಕಳಿಗೆ ಕಿಟ್ ಕೊಡುವುದರ ಮೂಲಕ ನಿರ್ವಹಿಸಿದರು.
ಈ ಕಾರ್ಯಕ್ರಮದಅಧ್ಯಕ್ಷರಾಗಿ ಪಿ.ಟಿ.ಎ ಪ್ರೆಸಿಡೆಂಟ್ ಚಂದ್ರಹಾಸ ಆಳ್ವ ಮಕ್ಕಳಿಗೆ ಶುಭವನ್ನಿತ್ತರು.ಈ ಕಾರ್ಯಕ್ರಮದಲ್ಲಿ ಎ೦.ಪಿ.ಟಿ.ಎ ಪ್ರೆಸಿಡೆಂಟ್ , ಎಲ್ಲಾ ಅಧ್ಯಾಪಕರು ಮತ್ತು ಮಕ್ಕಳ ಹೆತ್ತವರು ಭಾಗವಹಿಸಿದರು. ನಮ್ಮೀ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ರೇಣುಕಾ ಟೀಚರ್ ಸ್ವಾಗತಿಸಿ, ಇಸಾಕ್ ಮಾಸ್ಟರ್ ಧನ್ಯವಾದ ವನ್ನರ್ಪಿಸಿದರು. ಶಾಲೆಗಳು ಉಳಿಯಬೇಕಾದರೆ ಹೆತ್ತವರ,ಸಮಾಜದ ಪಾತ್ರ ತುಂಬಾ ಬೇಕು.ಸತ್ ಪ್ರಜೆಗಳನ್ನು ಸೃಷ್ಟಿಸುವ ಶಾಲೆಗಳು ಸಮಾಜದ ದೇಗುಲದಂತೆ ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ, ಎ೦ಬ ಆಶಯದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

No comments:
Post a Comment